ಲಕ್ನೋ: ರಮ್ಜಾನ್ ತಿಂಗಳಲ್ಲಿ ಮುಸ್ಲಿಮರು ಉಪವಾಸಿಗರನ್ನು ಕರೆದು ಇಫ್ತಾರ್ ಕೂಟ ಆಯೋಜಿಸುತ್ತಾರೆ. ಇಫ್ತಾರ್ ಕೂಟಕ್ಕೆ ತನ್ನನ್ನು ಕರೆಯಲಿಲ್ಲ ಎಂದು ಕೋಪಗೊಂಡ ವ್ಯಕ್ತಿಯೊಬ್ಬ ಆ ಕುಟುಂಬದ ಮೂವರು ಮಕ್ಕಳನ್ನು ಗುಂಡಿಟ್ಟು ಕೊಂದ ಆಘಾತಕಾರಿ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಈ ಘಟನೆ ನಡೆದಿದ್ದು, ಅಸ್ಮಾ, ಹಲೀಮಾ, ಅಬ್ದುಲ್ಲಾ ಎಂಬ ಮೂವರು ಮಕ್ಕಳು ಹತರಾದ ದುರ್ದೈವಿಗಳು. ಈ ಮೂವರು ಮಕ್ಕಳು ಸುಮಾರು ಏಳೆಂಟು ವರ್ಷದ ಪ್ರಾಯದವರು ಎಂದು ಪೊಲೀಸರು ಹೇಳಿದ್ದಾರೆ. ಫೈಸಲಾಬಾದ್ ನ ಯುನಿಕ್ ಮ್ಯಾರೇಜ್ ಹೋಮ್ ನ ಹಿಂದೆ ಇವರ ಕುಟುಂಬ ವಾಸವಾಗಿದೆ.

ಈ ಮಕ್ಕಳ ಕುಟುಂಬ ಶುಕ್ರವಾರ ಇಫ್ತಾರ್ ಪಾರ್ಟಿ ಆಯೋಜಿಸಿದ್ದು, ಓರ್ವ ಯುವಕನನ್ನು ಈ ಪಾರ್ಟಿಗೆ ಆಹ್ವಾನಿಸಿರಲಿಲ್ಲ. ಅದರಿಂದ ಕೋಪಗೊಂಡು ಆ ಯುವಕ ಈ ಕೃತ್ಯ ಎಸಗಿರಬಹುದು ಎಂದು ಹೇಳಲಾಗಿದೆ. ಮಾತ್ರವಲ್ಲ, ಮೃತದೇಹವನ್ನು ದೂತೋರಿ ಗ್ರಾಮದ ಅರಣ್ಯವೊಂದರ ಬಾವಿಗೆ ಎಸೆದಿದ್ದನು. ಹೆತ್ತವರು ಕಾಣೆಯಾದ ಮಕ್ಕಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪೊಲೀಸಧಿಕಾರಿ ದ್ರುವ ಭೂಷಣ್ ಮತ್ತು ಮುಶಿಯವರನ್ನು ಕೆಲಸದಿಂದ ವಜಾ ಮಾಡಲಾಗಿದೆ.

Leave a Reply