ಚಿಕ್ಕಮಗಳೂರು: ಪತ್ನಿಯ ರುಂಡವನ್ನು ಕತ್ತರಿಸಿ ಪೋಲಿಸ್ ಠಾಣೆಗೆ ಕೊಂಡೊಯ್ದು ಸ್ವತಃ ಶರಣಾದ ದಾರುಣ ಘಟನೆ ತರೀಕೆರೆ ತಾಲ್ಲೂಕಿನಲ್ಲಿ ನಡೆದಿದೆ.

ಇಲ್ಲಿನ ಅಜ್ಜಂಪುರ ಸಮೀಪದ ಶಿವಾನಿ ಗ್ರಾಮದ ನಿವಾಸಿ ಸತೀಸ್ ಕೊಲೆ ಆರೋಪಿಯಾಗಿದ್ದು, ತನ್ನ ಪತ್ನಿ ರೂಪಾಳ ಕೊಲೆ ಮಾಡಿದ್ದಾನೆ.

ಬೆಂಗಳೂರಿನಲ್ಲಿ ವಾಹನ ಚಾಲಕನಾಗಿ ದುಡಿಯುತ್ತಿದ್ದ ಸತೀಶ್ ಇತ್ತೀಚಿಗೆ ತನ್ನ ಗ್ರಾಮದಲ್ಲಿ ಮಾಂಸದ ಅಂಗಡಿ ನಡೆಸುತ್ತಿದ್ದನು. ಒಂಭತ್ತು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಇವರಿಗೆ ಇಬ್ಬರು ಮಕ್ಕಳಿದ್ದು, ಆಕೆಗಿದ್ದ ಪರ ಪುರುಷನೊಂದಿಗೆ ಇದ್ದ ಅನೈತಿಕ ಸಂಬಂಧವೇ ಈ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಈ ಬಗ್ಗೆ ದಂಪತಿಗಳ ನಡುವೆ ಬಹಳ ಬಾರಿ ಜಗಳ ನಡೆದಿದ್ದು ವಿವಾದವು ಪೊಲೀಸ್ ಠಾಣೆಗೂ ತಲಪಿತ್ತು. ನಂತರ ಸಂಬಂಧಿಕರು ರಾಜಿ ಮಾಡಿ ದಂಪತಿಗಳನ್ನು ಒಂದು ಮಾಡಿದ್ದರು.
ರವಿವಾರ ರಾತ್ರಿ ಸತೀಶ್ ಅಂಗಂಡಿಯಿಂದ ಬಂದಾಗ ಮನೆಯಲ್ಲಿ ಅನ್ಯ ಪುರುಷನ ಜೊತೆ ರೂಪಾ ಸಿಕ್ಕಿಬಿದ್ದಿದ್ದಳು ಎನ್ನಲಾಗಿದೆ. ಆರೋಪಿ ಸತೀಶ್ ನನ್ನ ಪೊಲೀಸರು ಬಂಧಿಸಿದ್ದಾರೆ.

ಇಂತಹ ಘಟನೆಗಳು ಸಮಾಜದಲ್ಲಿ ನಡೆಯುತ್ತಿದ್ದರೂ ಜನ ಪಾಠ ಕಲಿಯದಿರುವುದು ಖೇದಕರ. ಇದೀಗ ಮಕ್ಕಳು ಅನಾಥವಾಗಿದ್ದಾರೆ.

Leave a Reply