ಮುರ್ಷಿದಾಬಾದ್: ಮಕ್ಕಳ ವಿರುದ್ಧ ದೌರ್ಜನ್ಯಗಳ ಘಟನೆ ಇತ್ತೀಚೆಗೆ ವಿಪರೀತವಾಗಿ ನಡೆಯುತ್ತಿದ್ದುಇದೀಗ ಪಶ್ಚಿಮಬಂಗಾಳದ ಮುರ್ಷಿದಾಬಾದಿನಲ್ಲಿ ಹತ್ತು ವರ್ಷದ ಬಾಲಕನ ವಿರುದ್ಧ 200 ರೂಪಾಯಿ ಕದ್ದಿದ್ದಾನೆ ಎಂದು ಆರೋಪ ಹೊರಿಸಿ ಬಾಲಕನನನ್ನು ತಲೆಕೆಳಗಾಗಿ ನೇತಾಡಿಸಿ ಹೊಡೆಯುತ್ತಿರುವ ದೃಶ್ಯವನ್ನು ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಲಾಗಿದೆ.

ತದನಂತರ ಪುಟ್ಟ ಬಾಲಕನ ವಿರುದ್ಧ ನಡೆದಿರುವ ಬರ್ಬರ ಕೃತ್ಯ ಬಟಾ ಬಯಲಾಗಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅಂತ್ವರ್‍ದಿಪ್ ಗ್ರಾಮದಲ್ಲಿ ಅಂಗಡಿ ನಡೆಸುತ್ತಿರುವ ಸೊಫಿಕುಲ್ ಇಸ್ಲಾಮ್ ಮತ್ತು ಆತನ ಇಬ್ಬರು ಗೆಳೆಯರು ಬಾಲಕನಿಗೆ ಹೊಡೆದಿದ್ದರು. ಇನ್ನೊಂದು ಅಂಗಡಿಯಲ್ಲಿ ಈ ಬಾಲಕ ಕೆಲಸ ಮಾಡುತ್ತಿದ್ದಾನೆ.

ಬಾಲಕನ ತಂದೆಯ ದೂರಿನಲ್ಲಿ ಅಂಗಡಿ ಮಾಲಕ ಮತ್ತು ಆತನ ಇಬ್ಬರು ಗೆಳೆಯರಾದ ನೂಹ್ ಶೇರ್ಖ ಮತ್ತು ನಜೀಮುಲ್ ಶೇಖ್ ಎಂಬವರನ್ನು ಪೊಲೀಸುರ ಬಂಧಿಸಿ ಕರೆದೊಯ್ದಿದ್ದಾರೆ. ತನ್ನ ಮಗ ಕದ್ದಿರಲಿಲ್ಲ ಎಂದು ತಂದೆ ಸನ್ವಾರ್ ಶೇಖ್ ಹೇಳಿದರು. ಘಟನೆಯ ನಂತರ ಬಾಲಕನಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಕೊಡಿಸಿ ಈಗ ಡಿಸ್ಚಾರ್ಜ್ ಮಾಡಲಾಗಿದೆ.

Leave a Reply