ಮಂಗಳೂರು ಜ 2:ನಗರದ ಪಿಲಿಕುಳದ ಮಾನಸ ವಾಟರ್ ಪಾರ್ಕ್ ನಲ್ಲಿ ನೈತಿಕ ಪೋಲಿಸ್ ಗಿರಿ ನಡೆದ ಘಟನೆ ವರದಿಯಾಗಿದೆ. ನೀರಿನಲ್ಲಿ ಆಟವಾಡಲು ಬಂದ ಎರಡು ಜೋಡಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಜ 2 ರ ಮಂಗಳವಾರ ಮದ್ಯಾಹ್ನ ನಡೆದಿದೆ. ಒಂದು ಕೋಮಿನ ಯುವಕರು ಮತ್ತೊಂದು ಕೋಮಿನ ಯುವತಿಯೊಂದಿಗೆ ವಾಟರ್ ಪಾರ್ಕ್ ನಲ್ಲಿ ಮಜಾ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಹಿಂದೂ ಸಂಘಟನೆ ಕಾರ್ಯಕರ್ತರು ನೈತಿಕ ಪೋಲಿಸ್ ಗಿರಿ ನಡೆಸಿದ್ದಾರೆ. ಮಾಹಿತಿ ದೊರೆತ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕ ಯುವತಿಯರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು
ಹಿಂದೂ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲಿ ಥಳಿತ ನಡೆಸಿದ್ದು ಇದೀಗ ವೀಡಿಯೋ ವೈರಲ್ ಆಗಿದೆ. ಈ ಯುವಕ ಯುವತಿಯರು ಐಕಳ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆ ಮಾಡುವವರನ್ನು ಪೊಲೀಸರು ಚದುರಿಸಿದ್ದಾರೆ.

Leave a Reply