photo courtesy : coastal digest

ಮಂಗಳೂರು: ಯುನಿವೆಫ್ ಕರ್ನಾಟಕ ಸಂಘಟನೆ ವತಿಯಿಂದ ಸೆ.28 ರಂದು ಸಂಜೆ 6:30ಕ್ಕೆ ನಗರದ ಬಲ್ಮಠದ ಶಾಂತಿನಿಲಯದಲ್ಲಿ ‘ಸ್ನೇಹ ಸಂವಾದ’ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ಮಂಗಳೂರಿನ ಖ್ಯಾತ ನ್ಯಾಯವಾದಿ ಉದಯಾನಂದ ಎ, ಹೆಬಿಕ್ ಮೆಮೊರಿಯಲ್ ಚರ್ಚ್ ನ ಧರ್ಮಪಾಲಕ ಫಾ.ಗೋಲ್ಡಿನ್ ಜೆ.ಬಂಗೇರ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಸದಸ್ಯ ಹನೀಫ್ ಖಾನ್ ಕೊಡಾಜೆ ಭಾಗವಹಿಸುವರು, ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಮಧುಬನ್ ಗ್ರಾಫಿಕ್ಸ್ ನ ಪ್ರಸನ್ನ ಕುಮಾರ್, ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ಲಾಹ್ ಶರೀಫ್ ಹಾಗೂ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಆಝಾದ್ ಮತ್ತಿತರರು ಭಾಗವಹಿಸುವರು.

ಇದೇ ಸಂಧರ್ಭದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರಶ್ನೋತ್ತರ ಮಾಡುವ ಅವಕಾಶವಿರುವುದೆಂದು ಈ ಕಾರ್ಯಕ್ರಮದ ಸಂಚಾಲಕರಾಗಿರುವ ಅಬ್ದುಲ್ಲಾಹ್ ಪಾರೆ ಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply