ಕೊಚ್ಚಿ: ನ್ಯಾಯಕ್ಕಾಗಿ ಬೀದಿಗಿಳಿದ ಕ್ರೈಸ್ತ ಸನ್ಯಾಸಿಯರನ್ನು ಬೆಂಬಲಿಸಿ ಮಲೆಯಾಳಂ ಪ್ರಸಿದ್ಧ ನಟಿ ಮಂಜುವಾರ್ಯರ್ ರಂಗಪ್ರವೇಶಿಸಿದ್ದು, ಅತ್ಯಾಚಾರಕ್ಕೆ ತುತ್ತಾದ ಸಿಸ್ಟರ್ ಹೋರಾಟಕ್ಕೆ ಕೈಜೋಡಿಸುತ್ತೇನೆ ಎಂದು ಹೇಳಿದ್ದಾರೆ.

ಆರೋಪಿ ಜಲಂಧರ್ ಬಿಷಪ್ ವಿರುದ್ಧ ಕಾನೂನು ಕ್ರಮವನ್ನು ಜರಗಿಸಬೇಕಾಗಿದೆ ಎಂದು ನಟಿ ಆಗ್ರಹಿಸಿದರು. ಕ್ರಮ ಜರಗಿಸುವುದು ವಿಳಂಬಗೊಳ್ಳುವಾಗ ಬಹುದೊಡ್ಡ ವಿಶ್ವಾಸಿ ಸಮುದಾಯಕ್ಕೆ ನೋವುಂಟಾಗುತ್ತದೆ ಎಂದು ಅವರು ಅಭಿಪ್ರಾಯಿಸಿದರು.

ಕ್ರಿಸ್ತನಲ್ಲಿ ವಿಶ್ವಾಸ ಹೊಂದಿರುವ ಯಾರೂ ಬಿಷಪ್‍ರನ್ನು ಬೆಂಬಲಿಸಲಾರರು ಎಂದು ಭಾವಿಸುತ್ತಿದ್ದೇನೆ. ಯಾರಾದರೂ ಆರೋಪಿಯ ಜತೆ ಇದ್ದಾರೆ ಎಂದಾದರೆ ಸಿಗುವ ಸ್ವಲ್ಪ ಹಣಕ್ಕಾಗಿ ನಿಂದಿಸುವವರು ಆಗಿರುತ್ತಾರೆ. ಕ್ರೈಸ್ತ ಸನ್ಯಾಸಿನಿಯರು ಮತ್ತು ಅವರಸಂಗಡ ನಿಂತ ಸಾರ್ವಜನಿಕ ಸಮೂಹ ನ್ಯಾಯ ವ್ಯವಸ್ಥೆಯ ಮುಂದೆ ಮೊಣಕಾಲೂರಿ ನಿಂತಿದೆ. ಸರಕಾರಿ ವ್ಯವಸ್ಥೆಯು ಕಣ್ಣುತೆರೆಯಬೇಕೆಂದು ಮಂಜು ವಾರ್ಯರ್ ಹೇಳಿದರು.

ಕ್ರೈಸ್ತ ಸನ್ಯಾಸಿನಿಯರ ಗೌರವಕ್ಕೆ ಸುರಕ್ಷೆಗೆ ಆಘಾತವುಂಟು ಆಗಿದ್ದರೆ ಅದು ಸುಧಾರಿತ ಜನತೆಯಾದ ನಮ್ಮ ಹಕ್ಕುವಾಗಳಿಗೆ ಹಿನ್ನಡೆಯಾಗಿರುತ್ತದೆ. ಅದು ನಮ್ಮ ಸೋಲು ಕೂಡಾಆಗಿದೆ. ಇದಕ್ಕೆ ಜಲಂಧರ್ ಆಗಿದೆಯೋ ಶೋರ್ನೂರು ಆಗಿದೆಯೊ ಎನ್ನುವ ಭೇದವಿಲ್ಲ. ನ್ಯಾಯ ನೀರಿನಂತೆ ಹರಿಯಲಿ ಎಂದು ಮಂಜುವಾರ್ಯರ್ ಹೇಳಿದರು.

Leave a Reply