ಮುಸ್ಲಿಂ ಕುಟುಂಬವೊಂದು ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗಳೊಬ್ಬಳನ್ನು ದತ್ತು ಪಡೆದಿತ್ತು. ನಂತರ ಆ ಮಗಳಿಗೆ ಮದುವೆ ಮಾಡಿಸಿ ಕೊಟ್ಟರು. ಆದರೆ ವ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ‌ ಮಾಡಿಸಿಕೊಟ್ಟಿರುವುದು ವಿಶೇಷ ಅಲ್ವೇ?

ಹೌದಿ, ಈ ಘಟನೆ ಘಾಝಿಯಾಬಾದ್ ನಲ್ಲಿ ಬಹಳ ವರ್ಷಗಳ ಹಿಂದೆ ನಡೆದಿದೆ.
55 ವರ್ಷದ ಫರ್ನಿಚರ್ ಅಂಗಡಿ ಮಾಲಕ ನದೀಮ್ ಅವರು ರಾಖಿ ಎನ್ನುವ ಅನಾಥೆ ಹಿಂದು ಮಗುವನ್ನು ದತ್ತು ಪಡೆದು ನಂತರ ಅವಳಿಗೆ ಅವಳ ಇಚ್ಛೆಯನುಸಾರ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಡುವ ಮೂಲಕ ಸಮಾಜಕ್ಕೊಂದು ಒಳ್ಳೆಯ ಸಂದೇಶವನ್ನು ನೀಡಿದ್ದರು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪ್ರೇರಿತ ಕೋಮು ಘರ್ಷಣೆ ಅಲ್ಲಲ್ಲಿ ಕಂಡು ಬರುತ್ತಿದೆ.‌ ಈ ಸಂದರ್ಭದಲ್ಲಿ ಇಂತಹ ಘಟನೆಗಳು ಆಗಾಗ ಜನರಿಗೆ ನೆನಪಿಸಲೇ ಬೇಕಲ್ವೇ.. ಸಮಾಜದಲ್ಲಿ ಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಇಂತಹ ಸೌಹಾರ್ದತೆಯ ಘಟನೆಗಳು ಜನರ ಮುಂದಿಡುವ ಪ್ರಯತ್ನವನ್ನು ಎಲ್ಲರೂ ಮಾಡುತ್ತಿದೆ..

Leave a Reply