ಅಡೂರ್: ಪ್ರೇಮಿಗಳ ದಿನದಂದು ಹಲವಾರು ಹಿತೈಷಿಗಳ ಆಶೀರ್ವಾದದೊಂದಿಗೆ ರಾಜನ್ ಮತ್ತು ಸರಸ್ವತಿ ತಾಳಿ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ರಾಜನ್ ಮತ್ತು ಸರಸ್ವತಿ ಇಬ್ಬರೂ ಅಡೂರ್ ಮಹಾತ್ಮ ಜನಸೇವಾ ಕೇಂದ್ರದ ನಿವಾಸಿಗಳು.

ತಮಿಳುನಾಡು ಮೂಲದ ರಾಜನ್ (58) ಮತ್ತು ಅಡೂರ್ ಮೂಲದ ಸರಸ್ವತಿ (64) ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬಗಳ ಬೆಂಬಲದೊಂದಿಗೆ ಮದುವೆ ಆಯೋಜಿಸಲಾಗಿತ್ತು. ಅಡೂರ್‌ನ ಮಹಾತ್ಮ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಚಿತ್ತಾಯಂ ಗೋಪಕುಮಾರ್ ಈ ಮದುವೆ ಸಮಾರಂಭಕ್ಕೆ ಸಾತ್ ನೀಡಿರು.

ಅಡೂರ್ ಕಾರ್ಪೊರೇಶನ್ ಅಧ್ಯಕ್ಷ ಡಿ.ಸಜಿ, ಪಲ್ಲಿಕ್ಕಲ್ ಪಂಚಾಯತ್ ಅಧ್ಯಕ್ಷ ಸುಶೀಲಾ ಕುಂಜಮ್ಮ ಕುರುಪ್, ಬ್ಲಾಕ್ ಪಂಚಾಯತ್ ಸದಸ್ಯ ಶರತ್ ಚಂದ್ರನ್, ಸಮಾಜ ಕಲ್ಯಾಣ ಇಲಾಖೆ ಉಸ್ತುವಾರಿ ಜೆ.ಶಮ್ಲಾ ಬೀಗಮ್ ಇತರರು ಉಪಸ್ಥಿತರಿದ್ದರು. ಅಡೂರ್ ಗೋಲ್ಡ್ ಆಭರಣ ಮಾಲೀಕ ಸುಭಾಷ್ ವಧುವಿಗೆ ಆಭರಣಗಳನ್ನು ಉಡುಗೊರೆಯಾಗಿ ನೀಡಿದರು.

Leave a Reply