ಮಂಗಳೂರು : ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಮಾಧ್ಯಮ ಪ್ರತಿನಿಧಿಯಾಗಿ ಯುವ ಕವಿ ಇಬ್ರಾಹಿಂ ಖಲೀಲ್ ಪುತ್ತೂರು ಅವರನ್ನು ನೇಮಿಸಲಾಗಿದೆ.

ಬಿ.ಸಿ.ರೋಡ್ ರಿಕ್ಷಾ ಭವನದಲ್ಲಿ ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಅಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಇಬ್ರಾಹಿಂ ಖಲೀಲ್ ಪುತ್ತೂರುರವರು ಸ್ಟುಡೆಂಟ್ಸ್ ಐಕ್ಯ ಸಂಘ ಪುತ್ತೂರು ತಾಲೂಕಿನ ಕಾರ್ಯದರ್ಶಿಯಾಗಿ, ಪುತ್ತೂರು ತಾಲೂಕು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಮಾಧ್ಯಮ ವಕ್ತಾರರಾಗಿ, ಯುವ ಬರಹಗಾರರ ಒಕ್ಕೂಟ(ರಿ) ಇದರ ಪ್ರತಿನಿಧಿಯಾಗಿ ಹೀಗೆ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತೀದ್ದಾರೆ.

ಯುವ ಕವಿಯಾಗಿರುವ ಇಬ್ರಾಹಿಂ ಖಲೀಲ್ ಹಲವಾರು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಮತ್ತು ಕಥಾ ಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.

Leave a Reply