ಚಿಕ್ಕಮಗಳೂರು : ಇತ್ತೀಚಿಗೆ ಹಾಲಿಗೆ ಕೆಮಿಕಲ್ ಮಿಶ್ರಣ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಣ ತಾಣಗಳಲ್ಲಿ ವಿವಿಧ ತಲೆ ಬರಹದಡಿಯಲ್ಲಿ ವೈರಲ್ ಆಗಿತ್ತು. ಆದಾಗ್ಯೂ, ಅದು ಹಾಲಿಗೆ ಏನೋ ಬೆರೆಸುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುವ ವಿಡಿಯೋ ಆಗಿತ್ತು.

ಇದೀಗ ನಂದಿನಿ ಹಾಲಿನಲ್ಲಿ ಕೆಮಿಕಲ್ ಮಿಶ್ರಣ ಮಾಡುತ್ತಿದ್ದ ಮೂವರನ್ನು ದ ಚಿಕ್ಕಮಗಳೂರಿನ ತಾಲೂಕಿನ ಕುರುಬರಹಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದು ಇನ್ನೂ ಆರು ಜನ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಬಂಧಿತರನ್ನು ಶ್ರೀನಿವಾಸ್, ಸಣ್ಣಸ್ವಾಮಿ ಹಾಗೂ ಉದಯ್ ಎಂದು ಗುರುತಿಸಲಾಗಿದ್ದು, ಇವರೆಲ್ಲ ಸುಮಾರು 3 ವರ್ಷಗಳಿಂದ ಹಾಲಿಗೆ ಕೆಮಿಕಲ್ಸ್ ಮಿಕ್ಸ್ ಮಾಡುತ್ತಿದ್ದರು.
ಹಾಲಿನ ಪ್ರಮಾಣ ಹೆಚ್ಚಿಸಿ ಅಧಿಕ ಹಣ ಸಂಪಾದನೆ ಮಾಡುವ ಸಲುವಾಗಿ ಹಾಲಿಗೆ ರಾಸಾಯನಿಕ ಪೌಡರ್ನಂಥದ್ದನ್ನು ಸೇರಿಸಿ ಹಾಸನ ಹಾಲು ಒಕ್ಕೂಟದ ನಂದಿನಿ ಹಾಲಿನ ಡೈರಿಗೆ ಮಾರುತ್ತಿದ್ದರು ಎನ್ನಲಾಗಿದೆ.

ಕೆಎಂಎಫ್ ಅಧಿಕಾರಿಗಳು ಹಾಲಿನ ಗುಣಮಟ್ಟ ಪರಿಶೀಲಿಸಿದ್ದು ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದಿದ್ದಾರೆ.

Leave a Reply