ಸುಮಾರು 129 ಎಂಜಿನಿಯರ್ಗಳು, 23 ವಕೀಲರು, ಚಾರ್ಟರ್ಡ್ ಅಕೌಂಟೆಂಟ್ ಮತ್ತು 393 ಸ್ನಾತಕೋತ್ತರ ಪದವೀಧರರು ಒಟ್ಟು 12,453 ಮಂದಿ ರಾಜಸ್ಥಾನ ಅಸೆಂಬ್ಲಿ ಸಚಿವಾಲಯದ ಕಚೇರಿಯಲ್ಲಿ ಪಿಯೋನ್ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಅವರಲ್ಲಿ ಅಂತಿಮ ಪಟ್ಟಿಯ 18 ಮಂದಿಯಲ್ಲಿ ಹತ್ತನೇ ತರಗತಿ ಪಾಸಾದ ಶಾಸಕರ ಮಗನಿಗೆ ಕೆಲಸ ಸಿಕ್ಕಿದ್ದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವವರನ್ನು ಹಿಂದಿಕ್ಕಿ ರಾಮಕೃಷ್ಣ ಮೀನಾ ಕೆಲಸ ಗಿಟ್ಟಿಸಿಕೊಂಡರು.

ಅಸೆಂಬ್ಲಿಯಲ್ಲಿ ವರ್ಗ 4 ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ರಾಜ್ಯ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಆಗ್ರಹಿಸಿ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Leave a Reply