ನಮ್ಮವರು ಅಗಲಿದಾಗ ನಮಗೆ ಆಗುವ ದುಃಖ ಹೇಳ ತೀರದು. ಅಂತಹ ಭಾವನೆ ಪ್ರಾಣಿಗಳಲ್ಲೂ ಇರುತ್ತದೆ. ಆದರೆ ಕೆಲವೊಂದು ಪ್ರಾಣಿಗಳ ದಯೆ ಕಾಣುವಾಗ ನಾವು ಮನುಷ್ಯರಾಗಿದ್ದು ಏನು ಪ್ರಯೋಜನವೆಂದು ಅನಿಸಿದರು ತಪ್ಪಿಲ್ಲ! ಇಲ್ಲೊಂದು ಕೋತಿಯ ಮರಿ , ತನ್ನ ಅಮ್ಮ ಸತ್ತಿರುವುದನ್ನು ಕಂಡು ದುಃಖ ಪಡುವ ಅಪರೂಪದ ವಿಡಿಯೋವನ್ನು ನೋಡಬಹುದು.

ಇಂತಹ ವಿಡಿಯೋಗಳಿಂದ ನಿಜವಾಗಿಯೂ ಮನುಷ್ಯರಾದ ನಾವು ಬಹಳಷ್ಟು ಕಲಿಯಲಿಕ್ಕಿದೆ. ಯಾಕೆಂದರೆ ಮನುಷ್ಯ ಮನುಷ್ಯನನ್ನು ಕಂಡರೆ ಹಲ್ಲು ಕಡಿಯುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ಏನು ಅರಿಯದ ಮುಗ್ಧ ಪ್ರಾಣಿಗಳು ನಮ್ಮನ್ನು ಮೀರಿಸುವಂತಿದೆ.

ಬಹುಶಃ ಈ ವಿಡಿಯೋ ಒಂದು ಕ್ಷಣ ನಮ್ಮನ್ನು ಬಾವುಕರಾಗಿಸಬಹುದು. ಆದರೆ ನಾವಿಲ್ಲಿ ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ ಪ್ರತಿಯೊಂದು ಜೀವಕ್ಕೂ ಅದರದ್ದೇಯಾದ ಮೌಲ್ಯವಿದೆ ಎನ್ನುವ ಕಟು ಸತ್ಯ.

 

Leave a Reply