ಪುಸ್ತಕಗಳಿಂದ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ. ಕೃತಿಗಳನ್ನು ಬರೆಯುವುದು ಮತ್ತು ಪ್ರಕಟಯೋಗ್ಯವಾಗುವುದು ಬಹಳ ಸವಾಲಿನ ಕೆಲಸವಾಗಿದೆ‌. ನಾವು ನಮ್ಮ ಮಕ್ಕಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಕೊಡಬೇಕು. ಆದ್ದರಿಂದ ಕಿರಿಯ ವಯಸ್ಸಿನಲ್ಲಿ ಒಂದು ಕೃತಿ ಪ್ರಕಟವಾಗುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಇದಕ್ಕಾಗಿ ನಾನು ಮಫಾಝರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಫಾಝಾ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಎಂದು ಯಾನೆಪೊಯಾ ಯುನಿವರ್ಸಿಟಿ ರಿಜಿಸ್ಟ್ರಾರ್, ಡೀನ್ ಡಾ. ಶ್ರೀ ಕುಮಾರ್ ಮೆನನ್ ಹೇಳಿದರು.

ಅವರು ಮಂಗಳೂರಿನ ಯಾನೆಪೊಯಾ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಮಫಾಝ ಬರೆದ “LABYRINTHS EMOTIONS ” ಎಂಬ ಇಂಗ್ಲಿಷ್ ಕವನ ಸಂಕಲ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಡಾಕ್ಟರ್ ಜಾವಿದ್ ಜಮೀಲ್, ಡೆಪ್ಯುಟಿ ಡೈರೆಕ್ಟರ್ ಚೇರ್ ಆಫ್ ಇಸ್ಲಾಮಿಕ್ ಸ್ಟಡೀಸ್ ಆಂಡ್ ರಿಸರ್ಚ್ ಮಾತನಾಡುತ್ತಾ, “ಕವನಗಳು ನಮ್ಮ ಚಿಂತನೆಗೆ ರೂಪ ಕೊಡುತ್ತದೆ. ಹಲವಾರು ಕ್ರಾಂತಿಕಾರಿಗಳು ಕವಿಗಳಾಗಿದ್ದರು. ಅದು ಮನಸ್ಸಿಗೆ ನಾಟುತ್ತದೆ” ಎಂದರು.

ಫರ್ಹಾದ್ ಯಾನೆಪೊಯಾ ಸಂದರ್ಭೋಚಿತ ಮಾತನಾಡಿದರು. ಪ್ರಿನಿಪಲ್ ಜೋಸೆಫ್ ಮೆಚ್ಚಿರತ್, ಮಿಶ್ರಿಯಾ ಜಾವೆದ್, ಲೇಖಕಿ ಮಫಾಝ ತಂದೆ ಶರ್ಫುದ್ದೀನ್, ಶರ್ಲಿ ಉಪಸ್ಥಿತರಿದ್ದರು.

ಕವಯತ್ರಿ, ಲೇಖಕಿ ಮಫಾಝ ಶರ್ಫುದ್ದೀನ್ ಕಿರು ಪರಿಚಯ

ಮಫಾಝ ಶರಫುದ್ದೀನ್ ಆಗ್ನೆಸ್ ಕಾಲೇಜ್ ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ತನ್ನ ಬಾಲ್ಯವನ್ನು ಕುವೈಟಿನಲ್ಲಿ ಕಳೆದ ಮಫಾಝ ಮೂರನೆ ತರಗತಿಯ ವಿದ್ಯಾರ್ಥಿಯಾಗಿರುವಾಗಲೇ University of South Wales ಮತ್ತು McMillan India ಜಂಟಿಯಾಗಿ ನಡೆಸಿದ ಇಂಗ್ಲಿಷ್ ಭಾಷ ಪ್ರಾವಿಣ್ಯತೆಯ ಪರೀಕ್ಷೆಯಲ್ಲಿ ಕುವೈಟಿಗೇ ಪ್ರಥಮ ಸ್ಥಾನವನ್ನು ಗಳಿಸಿದ್ದಳು. ತನ್ನ ಎಂಟನೇ ವಯಸ್ಸಿನಿಂದಲೇ ಕವನವನ್ನು ರಚಿಸಲು ಪ್ರಾರಂಭಿಸಿ ಅನೇಕ ಸಮಾಜಿಕ ವಿಷಯಗಳನ್ನೊಳಗೊಂಡಂತೆ ಸುಮಾರು 125 ಕವನಗಳನ್ನು ರಚಿಸಿದ್ದಾರೆ. ಬಿ ಎಸ್ ಶರಫುದ್ದೀನ್ ಮತ್ತು ಸಮೀನಾ ಅಫ್ಶಾನ್ ದಂಪತಿಯ ಪುತ್ರಿಯಾದ ಮಫಾಝ ನಗರದ ಯೆನಪೊಯ್ಯ ಶಾಲೆಯ ಹಳೆಯ ವಿದ್ಯಾರ್ಥಿನಿ.

Leave a Reply