ಮುಂಬೈ: ಎಟಿಎಂನಲ್ಲಿ ಮಹಿಳೆಯರ ಪರ್ಸ್ ಎಳೆದು ಹಣ ಕಸಿದು ಓದುವ ದುರುಳರನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ಮಹಿಳೆಯೊಂದಿಗೆ ವಿಕೃತ ವಾಗಿ ವರ್ತಿಸಿ ಪೋಲೀಸರ ಅಥಿತಿಯಾಗಿದ್ದಾನೆ. ಮೊದಲು ಮಹಿಳೆಗೆ ಹಣ ಡ್ರಾ ಮಾಡಲು ಸಹಕರಿಸುತ್ತೇನೆ ಎಂದ ಆತ, ಅದಕ್ಕೆ ಮಹಿಳೆ ನಿರಾಕರಿಸಿದಾಗ ಕೆಟ್ಟದಾಗಿ ನಿಂದಿಸಲು ತೊಡಗಿದ್ದು, ಮಾತ್ರವಲ್ಲ ಮಹಿಳೆಗೆ ತನ್ನ ಗುಪ್ತಾಂಗ ತೋರಿಸಿ ವಿಕೃತ ಮೆರೆದಿದ್ದಾನೆ. ಈ ಬಗ್ಗೆ ಮಹಿಳೆಯರು ವಿಡಿಯೋ ಸಮೇತ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದರು. ಮಹಿಳೆ ನೀಡಿದ ದೂರನ್ನು ಆಧರಿಸಿ ಎಟಿಎಂನ ಸಿಸಿಟಿವಿಯನ್ನು ವೀಕ್ಷಿಸಿ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಕೃತ ವ್ಯಕ್ತಿ ಮೈಮುಟ್ಟಲೂ ಹಿಜರಿಯಲಿಲ್ಲ, ಆ ಬಳಿಕ ಆತನ ವರ್ತನೆಯನ್ನು ಮಹಿಳೆ ವಿಡಿಯೋ ಮಾಡಿದ್ದು ಆತನ ಮೇಲೆ ಐಪಿಸಿ ಸೆಕ್ಷನ್ 354, 354(ಎ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

https://www.instagram.com/p/BxXllJaFDhn/?utm_source=ig_web_copy_link

ರಿಕ್ಷಾ ಡ್ರೈವರ್ ಹಣ ಪಾವತಿಸಲು ಮಹಿಳೆ ಹರಿ ಓಂ ನಗರ ರಸ್ತೆಯ ಮುಲುಂದ್ (ಪೂರ್ವ) ಎಟಿಎಂಗೆ ಮುಂಜಾನೆ ಹೋದಾಗ ಈ ಘಟನೆ ನಡೆದಿದೆ. ಆಕೆ ಆತನ ವಿಡಿಯೋ ಮಾಡುತ್ತಿದ್ದಂತೆ ಆತ ಅಲ್ಲಿಂದ ಓಡಿಹೋಗಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ. ಮಹಿಳೆಯ ಧೈರ್ಯವನ್ನು ಮತ್ತು ದೂರು ನೀಡಲು ಹಿಂಜರಿಕೆ ತೋರದ್ದನ್ನು ಸಾಮಾಜಿಕ ಜಾಲತಾಣಿಗರು ತುಂಬಾ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಸಿಸಿ ಟಿವಿ ಆಧಾರದಲ್ಲಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply