ಚಿನು ಕ್ವಾತ್ರಾ 27 ವರ್ಷದ ಯುವಕ ತನ್ನ ಪ್ರೀತಿಯ ನಗರವಾದ ಮುಂಬೈನಲ್ಲಿ ವಿಶೇಷ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಎದ್ದು ಒಬ್ಬಂಟಿಯಾಗಿ ಕಡಲತೀರಗಳ ಎಲ್ಲಾ ಕೊಳಕುಗಳನ್ನು ಶುಚಿಗೊಳಿಸುತ್ತಾನೆ.

ದೇಶ ಉದ್ಧಾರ ಆಗಬೇಕು ಎಂದು ಬಾಯಲ್ಲಿ ಹೇಳುವ ಹಲವರನ್ನು ಕಾಣಬಹುದು. ಆದರೆ ಚಿನು ಕ್ವಾತ್ರಾ ಅದನ್ನು ಜೀವನದಲ್ಲಿ ಪಾಲಿಸುತ್ತಿದ್ದಾರೆ. ಆದ್ದರಿಂದ, 20 ವಾರಗಳಿಂದ, ಅವರು ಮುಂಬೈನ ದಾದರ್ ಬೀಚ್ ಅನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮುಂಬಯಿ ವರ್ಸಾವಾ ಬೀಚನ್ನು ಪರಿಸರ ಪ್ರೇಮಿ, ಸಾಮಾಜಿಕ ಕಾರ್ಯಕರ್ತ ಅಫ್ರೋಜ್ ಶಾ ಅವರುಸುಮಾರು 115 ವಾರಗಳಿಂದ ಸ್ವಚ್ಛಗೊಳಿಸುತ್ತಿದ್ದಾರೆ. ಅಫ್ರೋಜ್ ಶಾರವರಿಂದ ಪ್ರೇರಣೆ ಪಡೆದು ಚಿನು ಕ್ವಾತ್ರಾ ಈ ರಂಗದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಗಿ ಹೇಳುತ್ತಾರೆ.

ಎಮ್ ಬಿಎ ಪದವೀಧರ ಕ್ವಾತ್ರಾ ತನ್ನ ಕೆಲಸ ತ್ಯಜಿಸಿ ತನ್ನನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಗಣೇಶನ ಉತ್ಕಟ ಭಕ್ತರಾಗಿರುವ ಅವರು ಹಬ್ಬ ಮುಗಿದ ಜನರು ಮುಳುಗಿಸಿದ ಗಣೇಶನನ್ನು ಮರೆಯುತ್ತಾರೆ ಎಂದು ಗಮನಿಸಿ ಈ ಕೆಲಸವನ್ನು ಮಾಡುತ್ತಿದ್ದಾರೆ.

Leave a Reply