ವಿಜಯಪುರದ ಅಲಿಯಾಬಾದ್ ನಿವಾಸಿ ಅನ್ವರ್ ಸುದ್ದಿಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಅವರು ಅಯ್ಯಪ್ಪ ಮಾಲೆ ಧರಿಸುತ್ತಿದ್ದಾರೆ.

ಇದಕ್ಕೆ ನನ್ನ ಕುಟುಂಬದ ಬೆಂಬಲವೂ ಇದೆ. ಇದರಿಂದ ನನಗೆ ಬಹಳಷ್ಟು ಪ್ರಯೋಜನ ಆಗಿದೆ ಎನ್ನುತ್ತಾರೆ ಅನ್ವರ್. ಮೂರು ದಿನಗಳ ಕಾಲ ಶಬರಿ ಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಊರಿಗೆ ಹಿಂದಿರುಗುತ್ತಾರೆ.

ಮುಸ್ಲಿಂ ವ್ಯಕ್ತಿಯೋರ್ವರು ಅಯ್ಯಪ್ಪ ಮಾಲೆ ಧರಿಸಿರುವುದು ಬಹುಶಃ ಇದೇ ಮೊದಲ ಬಾರಿ ಆಗಿರಬಹುದು ‌. ಧಾರ್ಮಿಕವಾಗಿ ಜಾಗೃತರಾಗಿರುವ ಸಮಾಜದಲ್ಲಿ ಅನ್ಯಧರ್ಮದ ಆಚಾರ ವಿಚಾರಗಳನ್ನು ಅಳವಡಿಸುವುದು ಒಂದೆಡೆ ಸೌಹಾರ್ದ ಸಂದೇಶ ಆದರೆ ಇನ್ನೊಂದೆಡೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

Leave a Reply