closeup of the feet of a dead body covered with a sheet, with a blank tag tied on the big toe of his left foot, in monochrome, with a vignette added

ಚೆನ್ನೈ : ಬುರ್ಖಾಧಾರಿ ಮಹಿಳೆಯೊಬ್ಬಳು ಮಸೀದಿಯ ಕಚೇರಿಯ ಎಂದು ಕುಳಿತಿದ್ದ ಮೌಲ್ವಿ ಯೊಬ್ಬರಿಗೆ ಬೆಂಕಿ ಹಚ್ಚಿ ಜೀವಂತ ದಹಿಸಿದ ಘಟನೆ ಚೈನ್ನೈ ನಗರದ ಟ್ರಿಪ್ಲಿಕೇನ್ ನಲ್ಲಿ ನಡೆದಿದ್ದು, ಆರೋಪಿ ಮಹಿಳೆಯನ್ನು ಪತ್ತೆ ಹಚ್ಚಲು ಪೊಲೀಸರು ಬಲೇ ಬೀಸಿದ್ದಾರೆ.

ದೊಡ್ಡ ಮಸೀದಿಯ ಇಮಾಮ್ ಸೈಯದ್ ಫಜ್ರುದ್ದೀನ್(61) ಮೃತ ದುರ್ದೈವಿ. ಆವರು ತಮ್ಮ ಕಚೇರಿಯಲ್ಲಿ ಐವರು ಮಹಿಳಾ ಭಕ್ತರ ಜೊತೆ ಕುಳಿತಿದ್ದಾಗ ಈ ದಾಳಿ ನಡೆದಿದ್ದು, ರಾಸಾಯನಿಕ ಗಳನ್ನು ಎರಚಿ ಬೆಂಕಿ ಹಚ್ಚಲಾಗಿದ್ದು ದಾಳಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅದೇ ಬಿಲ್ಡಿಂಗ್ ನಲ್ಲಿದ್ದ ಮಣಿ ಎಂಬ ವ್ಯಾಪಾರಿಯೊಬ್ಬರು ಆ ಆಕೆಯನ್ನು ಹಿಡಿಯಲು ಯತ್ನಿಸಿದ್ದು, ಆಕೆ ಅವರನ್ನು ತಳ್ಳಿ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣ ಮಣಿ ಪೊಲೀಸರಿಗೆ ತಿಳಿಸಿದ್ದು, ಇಮಾಮರ ಕಚೇರಿಯು ಸುಟ್ಟು ಹೋಗಿದ್ದು, ಇದು ಪೂರ್ವ ಯೋಜಿತ ಕೃತ್ಯ ಆಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಸಾಂದರ್ಭಿಕ ಚಿತ್ರ

Leave a Reply