ಭನಕ್‍ಪುರ್: ಜಾಟ್ ಸಮುದಾಯ ಪ್ರಭಾವವಿರುವ ಭನಕ್ ಪುರ ಗ್ರಾಮದಲ್ಲಿ ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ರಾಷ್ಟ್ರಗೀತೆ ಮೊಳಗುತ್ತದೆ. ಈ ವೇಳೆ ಗ್ರಾಮದಲ್ಲಿರುವ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ರಾಷ್ಟ್ರಗೀತೆಯನ್ನು ಹಾಡುತ್ತಾರೆ ಎಂದು ವರದಿಯಾಗಿದೆ. ಮಾತ್ರವಲ್ಲ 2 ಲಕ್ಷ ರುಪಾಯಿ ಖರ್ಚು ಮಾಡಿ 20 ಲೌಡ್ ಸ್ಪೀಕರ್ ಗಳನ್ನು ಇದಕ್ಕಾಗಿ ಅಳವಡಿಸಲಾಗಿದೆ.

ಗ್ರಾಮದ ಸರ್ ಪಂಚ್ ಸಚಿನ್ ಮತ್ತು ಆರ್ ಎಸ್ ಎಸ್ ನ ಸ್ವಯಂ ಸೇವಕರೂ ಆಗಿರುವ 24ರ ಹರೆಯದ ಸಚಿನ್ ಗ್ರಾಮದಲ್ಲಿ ಲೌಡ್ ಸ್ಪೀಕರ್ ಮತ್ತು 22 ಸಿಸಿಟಿವಿಯನ್ನು ಅಳವಡಿಸಿದ್ದಾರೆ. ಭಾರತದಲ್ಲಿ ತೆಲಂಗಾಣದ ಜಮ್ಮಿಕುಂಟ ಎಂಬ ಗ್ರಾಮದ ಗ್ರಾಮಸ್ಥರು ಜತೆಯಾಗಿ ರಾಷ್ಟ್ರಗೀತೆ ಹಾಡುತ್ತಿದ್ದು, ಅಲ್ಲಿಂದ ಪ್ರೇರಣೆ ಪಡೆದು ಈ ಕ್ರಮ ಅನುಷ್ಠಾನಕ್ಕೆ ತರಲಾಗಿದೆ. ಈಗ ದಿನದಲ್ಲಿ ಒಂದು ಬಾರಿ, ಮುಂದೆ ದಿನದಲ್ಲಿ ಎರಡು ಬಾರಿ ರಾಷ್ಟ್ರಗೀತೆ ಹಾಡಲಾಗುವುದು ಎಂದವರು ಹೇಳುತ್ತಾರೆ.

Leave a Reply