ಇವರು ರಾಷ್ಟ್ರಮಟ್ಟದ ಮಾಜಿ ಬಾಕ್ಸರ್‌ ಹಾಗೂ ಮಾಜಿ ಸೈನಿಕ ಆದರೆ ಅವರ ಈಗಿನ ಕೆಲಸ ಕೇಳಿದರೆ ಆಶ್ಚರ್ಯ ಆಗಬಹುದು. ಹೌದು ಇವರ ಕಥೆಯು ಸಿನಿಮಾಗಿಂತ ಕಡಿಮೆಯೇನಲ್ಲ.

“ನಾನು ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದೇನೆ. ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಯಾರೋ ಒಬ್ಬರು ಟೆಕ್ಸಾಸ್ ವಿಮಾನನಿಲ್ದಾಣದಲ್ಲಿ ನನ್ನನು ಮೋಸಗೊಳಿಸಿದರು. ನಾನು ತಪ್ಪಿಸಿ ಕೊಂಡಿದ್ದೇನೆ ಎಂದು ಸೈನ್ಯ ಘೋಷಿಸಲಾಯಿತು. ಸರ್ಕಾರ ಮತ್ತು ಸೈನ್ಯದ ಸಹಾಯಕ್ಕಾಗಿ ನಾನು ವಿನಂತಿಸುತ್ತೇನೆ, ಇದು ಸಣ್ಣ ಮತ್ತು ಅನುದ್ದೇಶಿತ ತಪ್ಪು ಎಂದು ಲಖಾ ಸಿಂಗ್ ಹೇಳಿರುದನ್ನು ಎಎನ್ಐ ವರದಿ ಮಾಡಿದೆ.

ರಾಷ್ಟ್ರಮಟ್ಟದ ಮಾಜಿ ಬಾಕ್ಸರ್‌ ಹಾಗೂ ಮಾಜಿ ಸೈನಿಕ ಲಖಾ ಸಿಂಗ್‌ ಈಗ ಪಂಜಾಬಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದಾರೆ. ಇಂತಹ ರಾಷ್ಟ್ರಮಟ್ಟದ ಮಾಜಿ ಬಾಕ್ಸರ್‌ ಹಾಗೂ ಮಾಜಿ ಸೈನಿಕನಿಗೆ ಇದೊಂದು ಪರೀಕ್ಷೆಯೇ ಸರಿ.

ಚಿತ್ರ ಕ್ರಪೆ: ಎಎನ್ಐ

Leave a Reply