ಸಾಂದರ್ಭಿಕ ಚಿತ್ರ

ವಿಶ್ವಸಂಸ್ಥೆ : ಇರಾನ್ ರಹಸ್ಯ ಪರಮಾಣು ಸಂಗ್ರಹಾಲಯವನ್ನು ಹೊಂದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೊಸ ಆರೋಪವನ್ನು ಅವರು ಹೊರಿಸಿದ್ದು ಇದು 2015ರ ಅಣು ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಅಣ್ವಸ್ತ್ರ ಈಗಲೂ ಇರಾನ್ ಅಭಿವೃದ್ಧಿ ಪಡಿಸುತ್ತಿದೆ ಎನ್ನುವುದಕ್ಕಿರುವ ಪುರಾವೆ ಇದು. ಸಂಗ್ರಹಾಲಯದಲ್ಲಿ ಬಹುದೊಡ್ಡ ಅಣ್ವಸ್ತ್ರ ಸಂಗ್ರಹವಿದ್ದು ಅಸಂಸ್ಕೃತ ವಸ್ತುಗಳನ್ನು ಸುರಕ್ಷಿತವಾಗಿರಿಸಲಾಗಿದೆ. ಇರಾನಿನ ರಹಸ್ಯ ಪರಮಾಣು ಯೋಜನೆಯ ಭಾಗವಾಗಿ ಸಂಗ್ರ್ ಕಾರ್ಯಾಚರಿಸುತ್ತಿದೆ ಎಂದು ನೆತನ್ಯಾಹು ಹೇಳಿದರು.

ನೆತನ್ಯಾಹುರ ಆರೋಪವನ್ನು ಇರಾನ್ ತೀವ್ರವಾಗಿ ಖಂಡಿಸಿದ್ದು. ಸುಳ್ಳು ಮತ್ತು ಅರ್ಥಹೀನ ಹಾಗೂ ಅನವಶ್ಯಕ ಆರೋಪಗಳಿವು ಎಂದು ಇರಾನಿನ ವಿದೇಶ ಸಚಿವಾಲಯ ಹೇಳಿದೆ.

ಇರಾನ್ ವಿರುದ್ಧ ಅಮೆರಿಕದ ಆರ್ಥಿಕ ದಿಗ್ಬಂಧನ ನವೆಂಬರಿನಲ್ಲಿ ಜಾರಿಗೊಳ್ಳಲಿದೆ. ದಿಗ್ಬಂಧನ ಜಾರಿಗೆ ಬಂದರೆ ಇರಾನಿನಿಂದ ತೈಲ ಖರೀದಿ ಕೊನೆಗೊಳಿಸುವಂತೆ ಅಮೆರಿಕ ತನ್ನ ಮಿತ್ರ ರಾಷ್ಟ್ರಗಳನ್ನು ಆಗ್ರಹಿಸಿದೆ. ಚೀನದ ನಂತರ ಭಾರತ ಇರಾನ್‍ನಿಂದ ಅತಿ ಹೆಚ್ಚು ತೈಲ ವ್ಯವಹಾರವನ್ನು ಹೊಂದಿದೆ.

Leave a Reply