ಎಚ್ಚರಿಕೆ 1: ಈ ನೀವು ನೋಡುವುದು ತುಂಬಾ ಅಪಾಯಕಾರಿ. ಮಾತ್ರವಲ್ಲ ಯಾವುದೇ ಸಂದರ್ಭಗಳಲ್ಲಿ ಇದನ್ನು ಮಾಡಲು ಪ್ರಯತ್ನಿಸಬಾರದು.

ಎಚ್ಚರಿಕೆ 2: ಧೂಮಪಾನವು ಆರೋಗ್ಯಕ್ಕೆ ಹಾನಿಯಾಗುತ್ತದೆ.

ರಾಕೆಟ್ಗಳು ದೀಪಾವಳಿ ಹಬ್ಬದ ಆಕರ್ಷಕ ಕ್ರ್ಯಾಕರ್ ಆಗಿದ್ದು, ಇದು ಹಬ್ಬದ ಋತುವಿನಲ್ಲಿ ಬಹಳಷ್ಟು ಅಪಘಾತಗಳನ್ನು ತಂದೊಡ್ಡುತ್ತದೆ. ಮದುವೆಯ ಸಮಾರಂಭಗಳಲ್ಲಿ, ಹುಟ್ಟುಹಬ್ಬದ ಮತ್ತು ಸಂಗೀತ ಕಾರ್ಯಕ್ರಮಗಳಲ್ಲಿ ಇದನ್ನು ಅನೇಕ ವೇಳೆ ಬಳಸಲಾಗುತ್ತದೆ. ಇದನ್ನು ಉಡಾಯಿಸುವಾಗ ಬಾಟಲಿಗಳನ್ನು ಬಳಸುತ್ತಾರೆ. ಆದರೂ ಅದರ ಬಗ್ಗೆ ಬಹಳ ಜಾಗ್ರತೆ ವಹಿಸುತ್ತಾರೆ.

ಆದಾಗ್ಯೂ ಈ ಗುರುತಿಸಲಾಗದ ವ್ಯಕ್ತಿಯ ವಿಡಿಯೋ ಭಾರೀ ವೈರಲ್ ಆಗಿದ್ದು, ಈ ವ್ಯಕ್ತಿ ಸಿಗರೇಟ್ ನಿಂದ ಅದೂ ಕೈಯಲ್ಲಿ ರಾಕೆಟನ್ನು ಉಡಾಯಿಸುತ್ತಾದ್ದಾರೆ. ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಲ್ಲಿ ವಿವಿಧ ಕ್ಯಾಪ್ಶನ್ ಕೊಟ್ಟು ಜನ ತಮಾಷೆಗಾಗಿ ಫಾರ್ವಾರ್ಡ್ ಮಾಡುತ್ತಿದ್ದಾರೆ. ನಾಸಾದವರು ಈ ರಾಕೆಟ್ ಉಡಾಯಿಸುವ ವಿಜ್ಞಾನಿಯನ್ನು ಹುಡುಕುತ್ತಿದ್ದಾರೆ ಎಂದು ಕೆಲವರು ತಲೆಬರಹ ನೀಡಿ ವಿಡಿಯೋ ಫಾರ್ವಾರ್ಡ್ ಮಾಡಿದ್ದಾರೆ. ಆದ್ದರಿಂದ ಇವುಗಳನ್ನು ನೋಡಿ ಮಕ್ಕಳೂ ಹಾಗೆಯೆ ಪ್ರಯತ್ನಿಸುವ ಸಾಧ್ಯತೆ ಇದೆ. ಇದೊಂದು ಎಚ್ಚರಿಕೆಯ ಸಂದೇಶ ಆಗಿದೆ.

Leave a Reply