ಮದುವೆ ಸಮಾರಂಭವೊಂದು ರಣರಂಗವಾದ ಪ್ರಸಂಗ ವರದಿಯಾಗಿದ್ದು, ಕೇವಲ ಮಟನ್ ನೀಡಲಿಲ್ಲ ಎಂಬ ಕಾರಣಕ್ಕೆ ಮದುಮಗ ಮತ್ತು ಮದುಮಗಳು ಸೇರಿದಂತೆ ಮದುವೆ ದಿಬ್ಬಣಕ್ಕೆ ಬಂದವರ ಮೇಲೆ ಹಲ್ಲೆ ಮಾಡಲಾಗಿದೆ.
ಬಿಹಾರದ ಕಟಿಹಾರ್ ಎಂಬಲ್ಲಿ ಈ ಘಟನೆ ನಡೆದಿದ್ದು, ಮದುವೆಯಲ್ಲಿ ಮಟನ್ ಕೊಡಲಿಲ್ಲ ಎಂದು ಕೆಲವರು ಮದುವೆ ನಿಲ್ಲಿಸಿ ರಾದ್ಧಾಂತ ಮಾಡಿದ್ದಾರೆ.
“ಒಂದು ವೇಳೆ ಮಟನ್ ನೀಡದಿದ್ದರೆ ಮದುವೆ ನಡೆಯಲು ಬಿಡುವುದಿಲ್ಲ. ಬಳಿಕ ಗಲಾಟೆ ಮಾಡಲು ಶುರುಮಾಡಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. ಈ ಘಟನೆಯಲ್ಲಿ 9 ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a Reply