ಲಖನೌ : ನಾನು ಸನ್ಯಾಸಿ ನನಗೆ ಮತದಾನ ಮಾಡಿ, ಇಲ್ಲದ್ದರಿಂದ ನಾನು ನಿಮಗೆ ಶಾಪ ಹಾಕ್ತೇನೆ ಎಂದು ಸಾಕ್ಷಿ ಮಹಾರಾಜ್ ಮತದಾರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಉತ್ತರ ಪ್ರದೇಶದ ಉನಾವು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಾಕ್ಷಿ ಮಹಾರಾಜ್ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತ, ನಾನೊಬ್ಬ ಸನ್ಯಾಸಿ. ನಾನು ನಿಮ್ಮ ಮನೆ ಬಾಗಿಲಿಗೆ ಬೇಡಲು ಬಂದಿದ್ದೇನೆ. ನೀವು ಸನ್ಯಾಸಿಗೆ ಭಿಕ್ಷೆ ಕೊಡಲು ನಿರಾಕರಿಸಿದರೆ ನಿಮ್ಮ ಕುಟುಂಬದ ಸಂತೋಷವನ್ನು ಕಿತ್ತುಕೊಂಡು ಹೋಗುತ್ತೇನೆ ಮತ್ತು ನಿಮಗೆ ಶಾಪ ಹಾಕುತ್ತೇನೆ’ ಎಂದು ಸಾಕ್ಷಿ ಮಹಾರಾಜ್ ಹೇಳಿರುವುದಾಗಿ ಎಬಿಪಿ ಸುದ್ದಿವಾಹಿನಿ ವರದಿ ಮಾಡಿದೆ.

ನಾನು ಒಬ್ಬ ಸನ್ಯಾಸಿ. ನೀವು ನಾನು ಗೆಲ್ಲುವಂತೆ ಮಾಡಿದರೆ ನಾನು ಗೆಲ್ಲುತ್ತೇನೆ. ಇಲ್ಲದಿದ್ದರೆ ನಾನು ದೇವಸ್ಥಾನದಲ್ಲಿ ಭಜನೆ, ಕೀರ್ತನೆ ಮಾಡಿಕೊಂಡಿರುತ್ತೇನೆ. ಆದರೆ, ಇಂದು ನಾನು ನಿಮ್ಮ ಮತಗಳನ್ನು ಕೇಳಲು ಬಂದಿದ್ದೇನೆ. ನಾನೊಬ್ಬ ಸನ್ಯಾಸಿ. ನಿಮ್ಮ ಮನೆ ಬಾಗಿಲಿನ ಬಳಿ ಬೇಡಲು ಬಂದಿದ್ದೇನೆ. ಸನ್ಯಾಸಿಯನ್ನು ನೀವು ನಿರಕಾರಿಸಿದರೆ ನಿಮಗೆ ಶಾಪ ನೀಡುತ್ತೇನೆ’ ಎಂದಿದ್ದಾರೆ.

ಪುರಾಣದಲ್ಲಿ ಹೇಳಿದ ಕಾರ್ಯವನ್ನು ನಾನು ಮಾಡ್ತಾ ಇದ್ದೀನಿ, ನಾನು ನಿಮ್ಮಿಂದ ಹಣ ಆಸ್ತಿ ಕೇಳುತ್ತಿಲ್ಲ. ಬದಲಿಗೆ ಮತ ಕೇಳುತ್ತಿದ್ದೇನೆ. ನಿಮ್ಮ ಮತದಿಂದ 125 ಕೋಟಿ ಜನರ ಭವಿಷ್ಯ ಬದಲಾಗಿದೆ ಎಂದರು.

 

Leave a Reply