ಒಡಹುಟ್ಟಿದ ಅಣ್ಣ ತಮ್ಮಂದಿರು ಮತ್ತು ಅದರಲ್ಲೂ ಅವಳಿಗಳಾದರೆ ಪರಸ್ಪರ ಪ್ರೀತಿಯ ಜೊತೆ ಪೈಪೋಟಿ ಇರುತ್ತದೆ. ಆದರೆ ತಾಯಿಯ ಗರ್ಭದಲ್ಲೇ ಅವಳಿ ಮಕ್ಕಳು ಪರಸ್ಪರ ಬಾಕ್ಸಿಂಗ್ ಹಾಗೂ ಕಾಲಿನಿಂದ ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜನರ ಗಮನ ಸೆಳೆದಿದೆ. ಕಳೆದ ವರ್ಷ ಚೀನಾದಲ್ಲಿ ಈ ವೀಡಿಯೋ ಶೇರ್ ಮಾಡಲಾಗಿತ್ತು ಎನ್ನಲಾಗಿದೆ. 4 ತಿಂಗಳ ಗರ್ಭೀಣಿಯಾಗಿದ್ದ ವೇಳೆ ಅವಳಿ ಮಕ್ಕಳ ತಂದೆ 28 ವರ್ಷದ ಟಾವೋ ತನ್ನ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು ಎಂದು ಚೀನಾದ ಮಾಧ್ಯಮ ವರದಿ ಮಾಡಿವೆ. ಯಿಂಚುವಾನ್‌ನಲ್ಲಿ ವೈದ್ಯರ ಬಳಿ ಪರೀಕ್ಷೆಗೆ ಹೋದಾಗ ಅಲ್ಟ್ರಾಸೌಂಡ್‌ ವೇಳೆ ಈ ದೃಶ್ಯ ಬೆಳಕಿಗೆ ಬಂದಿದೆ. ಈ ಅವಳಿ ಮಕ್ಕಳಿಗೆ ‘ಚೆರ್ರಿ’ ಮತ್ತು ‘ಸ್ಟ್ರಾಬೆರಿ’ ನಿಕ್ ನೇಮ್ ಇಡಲಾಗಿದೆ.

Leave a Reply