ಕಾಶ್ಮೀರ:ಜಮ್ಮು ಮತ್ತು ಕಾಶ್ಮೀರದಿಂದ ಒಂದು ದುರಂತಮಯ ಘಟನೆ ವರದಿಯಾಗಿದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಂನಲ್ಲಿ ಪ್ರವಾಸಿಗರನ್ನು ತುಂಬಿದ ಬೋಟ್ ಒಂದು ಮಗುಚಿ ಏಳು ಮಂದಿ ನದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಅವರನ್ನು ರಕ್ಷಿಸಲು ಕಾಶ್ಮೀರಿ ಯುವಕನೊಬ್ಬ ನದಿಗೆ ಹಾರಿದ್ದು, ಕೊನೆಗೆ ಪ್ರವಾಸಿಗರ ಜೀವವನ್ನು ರಕ್ಷಿಸಿದ ಯುವಕ ಸ್ವತಃ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ರೌಫ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ರೌಫ್ ಅಹ್ಮದ್ ದಾರ್ ಇಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಇಲ್ಲಿ ಕೆಲಸ ಮಾಡುತ್ತಿದ್ದರು. ಸುದ್ದಿ ತಿಳಿದು ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ದಾರ್ ಅವರ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದು, ರಾತ್ರಿ ಆಗಿದ್ದ ಕಾರಣ ಹುಡುಕಾಟಕ್ಕೆ ಅಡಚಣೆಯಾಗಿತ್ತು.

ಪ್ರವಾಸಿ ಫೆರಿ ಬೋಟೊಂದು ಏಳು ಮಂದಿ ಪ್ರವಾಸಿಗರನ್ನು ಒಳಗೊಂಡಂತೆ (ಇಬ್ಬರು ವಿದೇಶಿಯರು) ನದಿಯಲ್ಲಿ ಪ್ರಯಾಣಿಸುತ್ತಿದ್ದಾಗ ನದಿಯಲ್ಲಿ ಗಾಳಿಗೆ ಸಿಲುಕಿ ಮುಳುಗಿತ್ತು ಈ ಸಂದರ್ಭದಲ್ಲಿ ಅದರೊಳಗಿದ್ದ ಟೂರಿಸ್ಟ್ ಗೈಡ್ ರವೂಫ್ ಅಹ್ಮದ್ ದಾರ್ ಎಲ್ಲ ಏಳು ಪ್ರವಾಸಿಗರನ್ನು ರಕ್ಷಿಸಿ ಕೊನೆಗೆ ನೀರಿನಲ್ಲಿ ಮುಳುಗಿ ಪ್ರಾಣ ತೆತ್ತಿದ್ದಾರೆ. ಇವರ ಮೃತದೇಹ ಇದೀಗ ಲಿಡರ್ ನದಿಯಲ್ಲಿ ಪತ್ತೆಯಾಗಿದೆ.
ರವೂಫ್ ಸಹಾಸಕ್ಕೆ ಗಣ್ಯರು ತಲೆದೂಗಿದ್ದು ಒಮರ್ ಅಬ್ದುಲ್ಲ ಸಹಾಸ ಪ್ರಶಂಸಿ ಟ್ವೀಟ್ ಮಾಡಿದ್ದರೆ, ಗವರ್ನರ್ ಸತ್ಯ ಮಲಿಕ್ ಪಾಲ್ ಮೃತರ ಕುಟುಂಬಕ್ಕೆ ಐದು ಲಕ್ಷ ಧನ ಸಹಾಯ ಘೋಷಿಸಿದ್ದಾರೆ.

Leave a Reply