Image :The Logical Indian

2018 ರ ಫೆಬ್ರವರಿ 18 ರಂದು ಹಸಿವಿನಿಂದ ಆಹಾರ ಕದ್ದು ಕ್ರೂರಿಗಳಿಂದ ಹತ್ಯೆ ಗೀಡಾದ ತ್ರಿಶೂರ್ ಅತ್ತಪಾಡಿ ನಿವಾಸಿ ಆದಿವಾಸಿ ಯುವಕ ಮಧು ಸಹೋದರಿ ಚಂದ್ರಿಕಾ ಮಹತ್ವದ ಸಾಧನೆ ಮಾಡಿದ್ದಾರೆ. ಮಧು ಸಹೋದರಿ ಚಂದ್ರಿಕಾ ಇದೀಗ ಕೇರಳ ಪೊಲೀಸ್‌ ಇಲಾಖೆಗೆ ಸೇರಿದ್ದಾರೆ. ಬುಧವಾರ ನಡೆದ ಸರಳ ಸಮಾರಂಭದಲ್ಲಿ ಚಂದ್ರಿಕಾ ಸೇರಿದಂತೆ ಸುಮಾರು 74 ಆದಿವಾಸಿ ಯುವಕ ಯುವತಿಯರನ್ನು ಪೊಲೀಸ್ ಇಲಾಖೆಗೆ ಸೇರಿಸಲಾಯಿತು. ಮಲ್ಲಿಯವರಿಗೆ ಮಧು ಹಾಗೂ ಚಂದ್ರಿಕಾ ಇಬ್ಬರೇ ಮಕ್ಕಳಾಗಿದ್ದು, ತಂದೆ ಮಾರುತಿ ಮಕ್ಕಳು ಎಳೆ ಪ್ರಾಯದವರಾಗಿದ್ದಾಗಲೇ ಇಹಲೋಕ ತ್ಯಜಿಸಿದ್ದರು. ಕೂಲಿ ಮಾಡಿ ಮಲ್ಲಿಯವರು ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದರು. ಚಂದ್ರಿಕಾ ಅವರು ಬಿ.ಕಾಂ ವರೆಗೆ ಶಿಕ್ಷಣ ಪಡೆದಿದ್ದರೂ ಕೆಲಸ ಸಿಕ್ಕಿರಲಿಲ್ಲ.

ಮಧು ಕೂಡ ವಿದ್ಯಾವಂತ ಯುವಕನಾಗಿದ್ದ, ಆದರೆ ಅಷ್ಟೆ ಮುಗ್ಥನೂ ಆಗಿದ್ದ. ಕಾಡಿನಲ್ಲಿ ಬೆಳೆದ ಆತನಿಗೆ ಅಷ್ಟಾಗಿ ಜನರೊಂದಿಗೆ ಬೆರೆಯುವ ಅಭ್ಯಾಸವಿರಲಿಲ್ಲ. 2018 ರ ಫೆಬ್ರವರಿ 18 ರಂದು ಬಡತನ ಕಾರಣದಿಂದಾಗಿ ಹಸಿವಿನಿಂದ ಅಂಗಡಿಗೆ ಬಂದಿದ್ದ, ಅಲ್ಲಿ ಆತ ಬ್ರೆಡ್ ಕದ್ದಿದ್ದಾನೆ ಎಂದು ಊರಿನ ಜನರು ಆತನನ್ನು ಥಳಿಸಿ ಹತ್ಯೆ ಗೈದಿದ್ದರು.

Leave a Reply