ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳು, ನಗದು ಬಹುಮಾನಗಳು ದೊರೆಯುವಾಗ ಕೊಲ್ಕೊತ್ತದಲ್ಲಿ ನಾಲ್ಕನೇ ರಾಂಕ್ ಪಡೆದ ವಿದ್ಯಾರ್ಥಿಗೆ ವಿಶಿಷ್ಟ ಅವಾರ್ಡ್ ನೀಡಿ ಗೌರವಿಸಲಾಗಿದೆ.
ಐಎಸ್ಸಿ 12 ನೇ ಪರೀಕ್ಷೆಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದ ವಿದ್ಯಾರ್ಥಿನಿಯನ್ನು 6 ಗಂಟೆಗಳ ಕಾಲ ಡೆಪ್ಯೂಟಿ ಕಮಿಷನರ್ ಆಗಿ ನೇಮಕ ಮಾಡಿದ ಘಟನೆ ವರದಿಯಾಗಿದೆ.
ಮಕ್ಕಳ ಯಶಸ್ಸನ್ನು ಗುರುತಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಐಎಸ್ಸಿ ಪರೀಕ್ಷೆಯಲ್ಲಿ ರಿಚಾ ಸಿಂಗ್ ರಾಷ್ಟ್ರ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದು ವಿಶೇಷ ಗಮನ ಸೆಳೆದಿದ್ದಾರೆ.
ಐಎಸ್ಸಿ 12 ನೇ ಪರೀಕ್ಷೆಯಲ್ಲಿ 99.25% ನಷ್ಟು ನಾಲ್ಕನೆಯ ರ್ಯಾಂಕ್ ಪಡೆದ ಪೊಲೀಸ್ ಠಾಣಾಧಿಕಾರಿ ಪುತ್ರಿ ರಿಚಾ ಸಿಂಗ್ ಬುಧವಾರ ಬೆಳಿಗ್ಗೆ 6 ರಿಂದ 12 ಮಧ್ಯಾಹ್ನ ಕೋಲ್ಕತಾ ಪೊಲೀಸರ ಉಪ ಕಮೀಷನರ್ ಆಗಿ ನೇಮಕಗೊಂಡರು . ತನ್ನ ತಂದೆಗೆ ನೀವು ಯಾವ ಆದೇಶದ ನೀಡುತ್ತೀರಿ ಎಂದು ರಿಚಾಗೆ ಕೇಳಿದಾಗ, “ನಾನು ಮನೆಗೆ ಹೋಗಲು ಆದೇಶ ಕೊಡುತ್ತೇನೆ” ಎಂದು ಹೇಳಿದಳು. “ಇವತ್ತು ಅವಳು ನನ್ನ ಮೇಲಧಿಕಾರಿಯಾಗಿ ನನಗೆ ಮನೆಗೆ ಬೇಗ ಹೋಗಲು ಆದೇಶ ನೀಡಿದ್ದಾಳೆ. ನಾನದನ್ನು ಅನುಸರಿಸುತ್ತೇನೆ” ಎಂದು ರಿಚಾ ತಂದೆ ಹೇಳಿದರು.