Representational image

ಇಸ್ಲಾಮಾಬಾದ್ ; ವಿಮಾನದಲ್ಲಿ ಪ್ರಯಾಣಿಸುವುದು ಇಂದು ಮಾಮೂಲಿಯಾದರೂ ಸ್ವಲ್ಪ ಅವಘಡ ಸಂಭವಿಸಿದರೆ ದೊಡ್ಡ ಅನಾಹುತವೇ ಆಗಿ ಬಿಡುತ್ತದೆ.
ಪಾಕಿಸ್ತಾನದಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆ ಶೌಚಾಲಯದ ಬಾಗಿಲು ಎಂದು ವಿಮಾನದ ಎಕ್ಸಿಟ್ ಅಥವಾ ನಿರ್ಗಮನದ ಬಾಗಿಲು ತೆರೆದ ಘಟನೆ ನಡೆದಿದೆ.
ಮ್ಯಾಂಚೆಸ್ಟರ್‌ನಿಂದ ಇಸ್ಲಾಮಾಬಾದ್‌ಗೆ ಹೋಗುತ್ತಿದ್ದ ವಿಮಾನ ರನ್‌ವೇನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ತುರ್ತು ನಿರ್ಗಮನ ದ್ವಾರದ ಬಟನ್‌ ಒತ್ತಿದ ಪರಿಣಾಮವಾಗಿ ವಿಮಾನವನ್ನು ನಿಲ್ಲಿಸಲಾಗಿದೆ. ಬಳಿಕ 40 ಪ್ರಯಾಣಿಕರನ್ನು ವಿಮಾನದಿಂದ ಲಗೇಜ್‌ ಸಹಿತ ಇಳಿಸಲಾಗಿದ್ದು, ವಿಮಾನವನ್ನು ತಪಾಸಣೆ ಮಾಡಲಾಗಿತ್ತು.

representational image

Leave a Reply