ಮುಂಬೈ: ತಿಹಾರ್ ಜೈಲಿನ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸದ್ದು ಮಾಡುತ್ತಿದೆ. ಜೈಲಿನ ಕೈದಿಯ ಬೆನ್ನಿನಲ್ಲಿ ಹಿಂದೂ ಧರ್ಮದ ಧಾರ್ಮಿಕ ಚಿಹ್ನೆಯಾದ ಓಂ ಎಂದು ಅಚ್ಚು ಹಾಕಿಸಿದ ಘಟನೆ ವರದಿಯಾಗಿದೆ. ದೆಹಲಿಯ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಕೈದಿ ನಬಿರ್, ತನ್ನ ಶರ್ಟ್ ತೆಗೆದು ತನ್ನ ಮೇಲೆ ಆದ ದೌರ್ಜನ್ಯವನ್ನು ಮ್ಯಾಜಿಸ್ಟ್ರೇಟ್ ಎದುರು ತೋರಿಸಿದರು.

ಸೂಪರಿಡೆಂಟ್ ರಾಜೇಶ್ ಚೌವ್ಹಾಣ್ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದ್ದು, 2017 ರಿಂದ ಮುಂಬೈನ ತಿಹಾರ್​ ಜೈಲ್​ನಲ್ಲಿರುವ ನಬೀರ್ ಏಪ್ರಿಲ್​ 12 ರಂದು ತನ್ನ ಬ್ಯಾರಕ್​ನಲ್ಲಿ ಇಂಡಕ್ಷನ್​ ಸ್ಟೌವ್​ ಸರಿಯಾಗಿ ಕೆಲಸ ಮಾಡದಿರುವ ಬಗ್ಗೆ ರಾಜೇಶ್​ ಚೌವ್ಹಾಣ್​ಗೆ ಕಂಪ್ಲೇಂಟ್​ ಮಾಡಿದ್ದ. ಇದರಿಂದ ಕೋಪಗೊಂಡು ರಾಜೇಶ್​ ಚೌವ್ಹಾಣ್​ ತನ್ನ ಸಿಬ್ಬಂದಿಯಿಂದ ಶಬ್ಬೀರ್​ ಮೇಲೆ ಹಲ್ಲೆ ಮಾಡಿಸಿದ್ದಾನೆ.

ಜೈಲಿನ ಕೋಣೆಯೊಂದರಲ್ಲಿ ಕೂಡಿ ಹಲ್ಲೆ ನಡೆಸಿದ ಸಿಬ್ಬಂದಿ ಬಳಿಕ ಓಂ ಅಚ್ಚಾಗಿದ್ದ ರಾಡ್​​ವೊಂದನ್ನ ಕಾಯಿಸಿ ಬೆನ್ನಿಗೆ ಅಚ್ಚು ಹಾಕಿದ್ದಾರೆ, ಮಾತ್ರವಲ್ಲ ಎರಡು ದಿನ ಈತನಿಗೆ ಊಟವನ್ನೇ ನೀಡದೇ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಬೀರ್ ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದ. ತಕ್ಷಣ ಕುಟುಂಬಸ್ಥರು ಕಾರ್​ಕಾರ್​ದೂಮಾ ಕೋರ್ಟ್​ಗೆ ಶಬ್ಬೀರ್​ಗೆ ಜೈಲಿನಲ್ಲಿ ಜೀವಭಯ ಇದೇ ಅಂತಾ ಅರ್ಜಿ ಸಲ್ಲಿಸಿದ್ದರು.

“ಈ ಬಗ್ಗೆ ಅಗತ್ಯ ಸಿ.ಸಿ.ಟಿ.ವಿ ತುಣುಕನ್ನು ಸಂಗ್ರಹಿಸಲಾಗುವುದು ಮತ್ತು ಇತರ ಕೈದಿಗಳ ಹೇಳಿಕೆ ಕೂಡ ತೆಗೆದುಕೊಳ್ಳಲಾಗುವುದು. ಜೈಲಿನಲ್ಲಿ ಆರೋಪಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವಶ್ಯಕವಾದ ವ್ಯವಸ್ಥೆಗಳನ್ನು ಮಾಡಬೇಕೆಂದು ನ್ಯಾಯಾಧೀಶರು ಹೇಳಿದ್ದಾರೆ.

ಆದರೆ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದು, ಇದು ಅವರ ತಂತ್ರವಾಗಿದೆ. ಬಲವಂತವಾಗಿ ಓಂ ಅಚ್ಚು ಹಾಕಿದರೆ ಹೀಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಾಬಿರ್ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯ ವಿಚಾರಣೆ ಎದುರಿಸುತ್ತಿದ್ದು, ಆತನನ್ನು ಬೇರೆ ವಾರ್ಡ್ ಗೆ ವರ್ಗಾಯಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Leave a Reply