Representational image

ಗುಜರಾತ್ ನಲ್ಲಿ ವಿಲಕ್ಷಣ ಘಟನೆ ನಡೆದಿದ್ದು, ತನಗೆ ಕಚ್ಚಿದ ಹಾವನ್ನು ಕಚ್ಚಿ ಸೇಡು ತೀರಿಸಿದ ಘಟನೆ ವರದಿಯಾಗಿದೆ. ಮಹಾಸಾಗರ್ ಎಂಬಲ್ಲಿ ಈ ಘಟನೆ ನಡೆದಿದ್ದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನಿಗೆ ಹಾವು ಕಚ್ಚಿದ್ದು, ಕೋಪಗೊಂಡ ರೈತ ಆ ಹಾವನ್ನು ಹಿಡಿದು ಕಚ್ಚಿ ಕೊಂಡಿದ್ದಾರೆ. ಆದರೆ ದುರದೃಶವಶಾತ್ ಈ ಘಟನೆಯಲ್ಲಿ ರೈತನೂ ತನ್ನ ಪ್ರಾಣ ಕಳಕೊಂಡಿದ್ದಾರೆ.
ಪರ್ವತ್ ಗಾಲಾ ಬರಿಯಾ ಎಂಬ 70 ವರ್ಷದ ವ್ಯಕ್ತಿ ಈ ಹಾವನ್ನು ಎತ್ತಿಕೊಂಡು ಕೋಪದಿಂದ ಬಾಯಿಗೆ ಹಾಕಿ ಕಚ್ಚಿದರು. ಈ ಘಟನೆಯನ್ನು ನೋಡುತ್ತಿದ್ದ ಅವರ ಮತ್ತೋರ್ವ ಸಂಬಂಧಿ ಹಾವನ್ನು ತೆಗೆದು ಸುಟ್ಟುಹಾಕಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ನಂತರ ಅವರ ಸಂಬಂಧಿಯು ಸತ್ತ ಹಾವಿನ ಅವಶೇಷದೊಂದಿಗೆ ಅವರನ್ನು ಸಮೀಪದ ಆಸ್ಪತ್ರೆಗೆಕರೆದೊಯ್ದರು. ಅಲ್ಲಿ ಅವರಿಗೆ ಚಿಕಿತ್ಸೆ ನಿರಾಕರಿಸಲಾಗಿದ್ದು, ಬಳಿಕ ಅವರು ಹತ್ತಿರದ ಮೂರು ಆಸ್ಪತ್ರೆಗೆ ಅಲೆದರು. ಇದು ನಮ್ಮ ನಮ್ಮ ದೇಶದ ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ತೋರಿಸುತ್ತದೆ. ಕೊನೆಗೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯ ವೇಳೆ ಅವರು ಅಸುನೀಗಿದರು. 2012 ರಲ್ಲಿ ಅಕ್ಕಿ ಭತ್ತದಲ್ಲಿ ಕೆಲಸ ಮಾಡುತ್ತಿದ್ದ ನೇಪಾಳಿ ವ್ಯಕ್ತಿ ಹೀಗೆಯೇ ಹಾವನ್ನು ಕಚ್ಚಿ ಕೊಂದಿದ್ದನು.

Leave a Reply