ಅಪಘಾತದಲ್ಲಿ ಕಾಲು ಕಳೆದುಕೊಂಡ ವಿದ್ಯಾರ್ಥಿಯೊಬ್ಬ ಕೆಲವು ಸಮಯದ ನಂತರ ಕೃತಕ ಕಾಲಿನ ಸಹಾಯದಿಂದ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದ. ಕೆಲವೊಮ್ಮೆ ತನ್ನ ಭಾರವಾದ ಕೃತಕ ಕಾಲಿನಿಂದಾಗಿ ಮನೆಯಿಂದ ಹೊರಗಿಳಿಯಲೇ ಒಪ್ಪುತ್ತಿಲ್ಲ.
ಕೃತಕ ಕಾಲುಗಳು ಹೆಚ್ಚಾಗಿ ಭಾರವಾಗಿಯೇ ಇರುತ್ತವೆ. ಅದನ್ನು ಹೊಂದಿರುವವರು ತಮ್ಮಲ್ಲಿ ಎಷ್ಟೇ ಪ್ರತಿಭೆಗಳಿದ್ದರೂ ಈ ಒಂದು ಕಾರಣದಿಂದಾಗಿ ಮೂಲೆ ಗುಂಪಾಗುತ್ತಿರುವರು. ಇದಕ್ಕೆ ಪರಿಹಾರ…?
ಅಮೇರಿಕಾದ ಎರಡೂ ಕಾಲುಗಳಿಲ್ಲದ ಡಾ| ಹೂಗ್ ಹೆರ್‍ರವರು ರೊಬೋಟಿಕ್ ತಂತ್ರಜ್ಞಾನದ ಮೂಲಕ ವಿವಿಧ ಪ್ರಾಣಿಗಳ ಅಂಗಾಂಶಗಳನ್ನು ಉಪಯೋಗಿಸಿ ಕಡಿಮೆ ತೂಕದ ಕಾಲುಗಳನ್ನು ಸಂಶೋಧಿಸಿರುವರು. ಅಮೇರಿಕಾದ ತಂತ್ರಜ್ಞಾನದ ಕಾಶಿ ಮೆಸಾಚುಸೆಟ್ಸ್ ಕಾಲುಗಳ ಪ್ರಯೋಗಾಲಯದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಸುಲಭವಾಗಿ ಉಪಯೋಗಿಸಲ್ಪಡುವ ಈ “ಸೈ ಬೋರ್ಗ್” ಕಾಲುಗಳನ್ನು ಅಳವಡಿಸಿದ ದಕ್ಷಿಣ ಆಫ್ರಿಕಾದ ಆಸ್ಕರ್ ಪಿಸ್ಟೋರಿಯಸ್- “ಬ್ಲೇಡ್ ಓಟಗಾರ” ಎಂಬ ಹೊಗಳಿಕೆಗೆ ಪಾತ್ರರಾಗಿರುವರು.
ಚೀನಾದಲ್ಲಿ ನಡೆದ ಒಲಿಂಪಿಕ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತೇನೆಂದು ಒಲಿಂಪಿಕ್ಸ್ ಸಮಿತಿಗೆ ಅರ್ಜಿ ಸಲ್ಲಿಸಿದ. ಕಾಲುಗಳೇ ಇಲ್ಲದ ಈತ ಏನು ಓಡಬಲ್ಲ ಎಂದು ಒಲಿಂಪಿಕ್ಸ್ ಸಮಿತಿಯು ಈತನ ಮನವಿಯನ್ನು ತಿರಸ್ಕರಿಸಿತ್ತು. ಆಸ್ಕರ್ ಪಿಸ್ಟೋರಿಯಸ್‍ನು ಈ ಬಗ್ಗೆ ಮೇಲ್ಮನವಿ ಸಲ್ಲಿಸಿದ ನಂತರ ಓಡಲು ಅವಕಾಶ ನೀಡಲಾಯಿತು. ಸ್ವಾಭಾವಿಕ ಕಾಲುಗಳಿರುವ ಇತರ ಹಲವಾರು ಅಥ್ಲೆಟ್‍ಗಳಿಗಿಂತ ವೇಗವಾಗಿ ಓಡುವುದರೊಂದಿಗೆ ಹಲವಾರು ಸ್ಪರ್ಧೆಗಳನ್ನು ಗೆದ್ದಿರುವರು. ಹಾಗೂ “ಕಾಲುಗಳಿಲ್ಲದ ವೇಗದ ಓಟಗಾರ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವರು.