ತೆಂಡುಲ್ಕರ್ ಅವರನ್ನು ‘ತಬ್ಬಿಕೊಳ್ಳುವುದು’ ಮತ್ತು ಅವರಿಂದ ಸಲಹೆಯನ್ನು ಪಡೆಯುವುದು ನನ್ನ ಬಯಕೆ ಎಂದು ಪಾಕ್ ಕ್ರಿಕೆಟಿಗ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟಿನಿಂದ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಓಪನರ್ ಅಬಿದ್ ಅಲಿ, ಭಾರತದ ಕ್ರಿಕೆಟ್ ದಂತಕತೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರನ್ನು ಭೇಟಿಯಾಗುವುದು ನನ್ನ ಕನಸಾಗಿದೆ ಎಂದು ಹೇಳಿದ್ದಾರೆ. “ಖಂಡಿತವಾಗಿ ನಾನು ಅವರನ್ನು ಅಪ್ಪಿಕೊಳ್ಳಬೇಕೆಂದು ಬಯಸುತ್ತೇನೆ … ಸಚಿನ್ ರನ್ನು ಭೇಟಿಯಾದ ದಿನ ನನ್ನ ಜೀವನದ ಅತ್ಯುತ್ತಮ ದಿನ. ಸಚಿನ್ ರಿಂದ ನನಗೆ ಬಹಳಷ್ಟು ಕಲಿಯಲಿಕ್ಕಿದೆ” ಎಂದು 31 ವರ್ಷದ ಅಲಿ ಹೇಳಿದರು.

Leave a Reply