ಏಪ್ರಿಲ್ 1, 2017 ರಿಂದ, ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ, ಸಾರ್ವಜನಿಕ ಬ್ಯಾಂಕುಗಳು ಎಲ್ಲಾ ಉಳಿತಾಯ ಖಾತೆಗಳಿಗೆ ಕನಿಷ್ಟ ಬಾಕಿ ಮೊತ್ತವನ್ನು ಕಡ್ಡಾಯವಾಗಿ ಕಾಯ್ದಿರಿಸಲು ಹೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಈ ಹಣವನ್ನು ನಿರ್ವಹಿಸಲು ವಿಫಲವಾದ ಗ್ರಾಹಕರಿಗೆ ದಂಡ ವಿಧಿಸಲು ಅವಕಾಶ ನೀಡಿದೆ.

ಆದ್ದರಿಂದ ಬಹಳಷ್ಟು ಬ್ಯಾಂಕ್ ಖಾತೆದಾರರು ತಮ್ಮ ಹಣವನ್ನು ಕಳೆದು ಕೊಳ್ಳಬೇಕಾಯಿತು. ಈ ವಾರದ ಆರಂಭದಲ್ಲಿಎಸ್ ಬಿ ಐ ಮಾತ್ರ ಗ್ರಾಹಕರಿಂದ ಪೆನಾಲ್ಟಿ ರೂಪದಲ್ಲಿ ರೂ. 1771.67 ಕೋಟಿ ಸಂಗ್ರಹಿಸಿದೆ ಎಂದು ಬಹಿರಂಗವಾಗಿದೆ. ಇದು ಹೆಚ್ಚಾಗಿ ಬಡಜನರು ಮತ್ತು ಕೆಲವು ಸಂದರ್ಭಗಳಲ್ಲಿ ಹಿರಿಯ ನಾಗರಿಕರ ಮೇಲೆ ಪರಿಣಾಮ ಬೀರುತ್ತದೆ.

ಕೇರಳದ ಅಲಪ್ಪುಳದ ವಯಸ್ಸಾದ ಮಹಿಳೆ ಹಮೀದಾ ಬೀವಿ ಪಿಂಚಣಿಯ ಹಣದಲ್ಲಿ ಜೀವನ ಕಳೆಯುತ್ತಿದ್ದು, ಅವರು ಕೊಯರ್ ವರ್ಕರ್ಸ್ ವೆಲ್ಫೇರ್ ಬೋರ್ಡ್ನಿಂದ ಪಿಂಚಣಿ ಪಡೆಯುತ್ತಾರೆ.

ಸ್ಥಳೀಯ ಬ್ಯಾಂಕಿನ ಶಾಖೆಯಲ್ಲಿ ಖಾತೆಯನ್ನು ಹೊಂದಿದ ಹಮೀದಾ, ಅವರು ಪಿಂಚಣಿಯಾಗಿ 3,300 ರೂ. ಪಡೆಯುತ್ತಾರೆ. ಆದರೆ ಅವರ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮೊತ್ತವನ್ನು ಉಳಿಸದೇ ಇರುವ ಕಾರಣ ಬ್ಯಾಂಕ್ 3,050 ರೂ. ಮೊತ್ತವನ್ನು ಅವರ ಖಾತೆಯಿಂದ ಕಡಿತಗೊಳಿಸಿದೆ.

ಅವರು ಪಿಂಚಣಿ ವಹಿವಾಟುಗಳಿಗೆ ಮಾತ್ರ ಖಾತೆಯನ್ನು ಬಳಸುತ್ತಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಹೊಂದಲು ವಿಫಲವಾದ ಎಲ್ಲಾ ತಿಂಗಳುಗಳಿಂದ 17.7 ಪ್ರತಿಶತದಷ್ಟು ದರದಲ್ಲಿ ಪೆನಾಲ್ಟಿ ಹಾಕಲಾಗಿದೆ. ಇಷ್ಟು ಮೊತ್ತದ ಹಣ ಬಡವರಿಗೆ ಎಷ್ಟು ಮುಖ್ಯವಾಗಿರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ.

Leave a Reply