ಈ ಮಗುವಿನ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗಿದೆ. ಈ ಫೋಟೋವನ್ನು ಐಪಿಎಸ್ ಸ್ವಾತಿ ಲಕ್ರಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪೋಲಿಸಧಿಕಾರಿ ಆರ್ ಸಂಜಯ್ ಕುಮಾರ್ ರನ್ನು ಕಂಡು 4 ತಿಂಗಳುಗಳ ಮಗು ನಗುತ್ತಿದೆ.ರಾತ್ರಿಯಲ್ಲಿ ತನ್ನ ತಾಯಿಯೊಂದಿಗೆ ರಸ್ತೆಯ ಮೇಲೆ ಮಲಗಿದ್ದಾಗ, ಇಬ್ಬರು ದುಷ್ಕರ್ಮಿಗಳು ಮಗುವನ್ನು ಅಪಹರಿಸಿದ್ದರು. ಪೊಲೀಸರು ಅಪಹರಣಕಾರರನ್ನು ಕೇವಲ 15 ಗಂಟೆಗಳೊಳಗೆ ಪತ್ತೆ ಹಚ್ಚಿ ಮಗುವನ್ನು ರಕ್ಷಿಸಿದ್ದರು.

ಈ ಮಗುವಿನ ಹೆಸರು ಫೈಝಾನ್ ಖಾನ್. ಹೈದರಾಬಾದ್ ನಂಪಲ್ಲಾದಲ್ಲಿ ಮಗುವಿನ ತಾಯಿಯ ಹುಮೈರಾ ಬೇಗಮ್ (21) ಭಿಕ್ಷೆ ಬೇಡಿಕೊಂಡು ಜೀವಿಸುತ್ತಿದ್ದಾರೆ.ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗುತ್ತಿದೆ.

Leave a Reply