ರೆಸ್ಟಾರೆಂಟ್ನಿಂದ ಮಹಿಳೆಯೊಬ್ಬರನ್ನು ಹೊತ್ತುಕೊಂಡು ಹೋದ ಪೋಲೀಸ್ ಕಾನ್ಸ್ಟೇಬಲ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಮ್ಲಾ ಮಿಲ್ ಬೆಂಕಿ ದುರಂತದ ವೇಳೆ ಮಹಿಳೆಯನ್ನು ಪೊಲೀಸ್ ರಕ್ಷಿಸಿದ್ದಾರೆ. ಈ ಘಟನೆಯಲ್ಲಿ ಹದಿನಾಲ್ಕು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ಕಾಣುವ ಕಾನ್ಸ್ಟೇಬಲ್ ಸುದರ್ಶನ್ ಶಿಂಧೆ ಅವರು ತಮ್ಮ ಇತರ ಸಹೋದ್ಯೋಗಿಗಳೊಂದಿಗೆ ಸ್ಥಳಕ್ಕೆ ತಲುಪಿದ ಮೊದಲ ವ್ಯಕ್ತಿ. ಮೂವರು ಬಲಿಪಶುಗಳನ್ನು ಸುಟ್ಟ ಸಂಕೀರ್ಣದಿಂದ ಹೊರಗೆ ತರುವಲ್ಲಿ ಸುದರ್ಶನ್ ಸಹಾಯ ಮಾಡಿದರು.
ಅವರನ್ನು ಕೆಳಗೆ ತರಲು ಅವರು ಏಳು ಮಹಡಿಗಳನ್ನು ಪ್ರತಿ ಬಾರಿ ಹತ್ತಿದರು.

“ನಾನು ಮೇಲಕ್ಕೆ ತಲುಪಿದಾಗ, ಎಲ್ಲವೂ ಸುಟ್ಟು ಹೋಗಿತ್ತು. ನಾನು ಕೆಳಗೆ ತಲುಪಿದಾಗ, ಸ್ಫೋಟಿಸುವ ಶಬ್ದ ಕೇಳಿತು. ಗ್ಯಾಸ್ ಸಿಲಿಂಡರ್ ಆಗಿರಬಹುದು. ಉಸಿರುಕಟ್ಟಿ ಸಾಯುವ ಅವಸ್ಥೆ ಇತ್ತು. ಓರ್ವ ಮಹಿಳೆ ಕೆಮ್ಮುವ ಸ್ವರ ಕೇಳುತ್ತಿತ್ತು. ಉಳಿದವರು ಬಹುಶಃ ಉಸಿರು ಕಟ್ಟಿ ಸತ್ತಿರಬಹುದು” ಎಂದು ಅವರು ಹೇಳುತ್ತಾರೆ.
ಇಂತಹ ಪೊಲೀಸ್ ಕಾಂನ್ಸ್ಟೇಬಲ್ ನಿಜಕ್ಕೂ ಜೀವಂತ ಹೀರೋ ಆಗಿದ್ದಾರೆ.

Leave a Reply