ಹೊಸದಿಲ್ಲಿ: ರೈತರ ಸಾಲಮನ್ನ ಆಗ್ರಹಿಸಿ ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ನಡೆದ ರೈತರ ರ್ಯಾಲಿಯನ್ನುಉತ್ತರಪ್ರದೇಶ-ದಿಲ್ಲಿಯ ಗಡಿಯಲ್ಲಿ ಪೊಲೀಸರು ತಡೆದು ಲಾಠಿಚಾರ್ಜು ಮತ್ತು ಆಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ.

ಪೊಲೀಸರು ನಿಷೇಧಾಜ್ಞೆ ವಿಧಿಸಿದದು ಹರಿದ್ವಾರದಿಂದಾರಂಭವಾಗಿದ್ದ ರೈತರ ರ್ಯಾಲಿ ಇಂದು ದಿಲ್ಲಿಗೆ ತಲುಪಲಿತ್ತು. ಗಾಝಿಯಾಬಾದಿನಲ್ಲಿ ಪೊಲೀಸರು ಇದನ್ನು ತಡೆದಿದ್ದಾರೆ. ರ್ಯಾಲಿಯಲ್ಲಿ ಇಪ್ಪತ್ತು ಸಾವಿರದಷ್ಟು ರೈತರು ಭಾಗವಹಿಸಿದ್ದರು.

ಕಿಸಾನ್ ಕ್ರಾಂತಿ ಯಾತ್ರಾ ಎನ್ನುವ ಹೆಸರಿನ ಬೃಹತ್ ರ್ಯಾಲಿಯನ್ನು ಹತ್ತನೆ ದಿವಸವೂ ತಡೆಯಲಾಗಿದೆ.ಗಾಝಿಯಾಬಾದಿನಲ್ಲಿ ಅಕ್ಟೋಬರ್ ನಾಲ್ಕರವರೆಗೆ ಮತ್ತು ಪೂರ್ವ ದಿಲ್ಲಿಯಲ್ಲಿ ಅಕ್ಟೋಬರ್ ಎಂಟರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ರ್ಯಾಲಿಯ ತಡೆದಿದ್ದನ್ನು ಕಿಸಾನ್ ಸಂಘದ ಅಧ್ಯಕ್ಷ ನರೇಶ್ ಟಿಕಾಯತ್ ಟೀಕಿಸಿದ್ದು, ಶಾಂತವಗಿ ಪ್ರತಿಭಟಿಸುವವರ ವಿರುದ್ಧ ಗಡಿಭಾಗದಲ್ಲಿ ತಡೆಯಲಾಗಿದೆ. ರ್ಯಾಲಿ ಶಾಂತಿಯುತವಾಗಿ ಹೋಗುತ್ತಿತ್ತು. ನಮ್ಮ ಸಮಸ್ಯೆಗಳನ್ನು ಇಲ್ಲಿನ ಸರಕಾರದೊಂದಿಗೆ ಹೇಳಲು ಸಾಧ್ಯವಾಗದಿದ್ದರೆ ಮತ್ತೆ ಯಾರೊಡನೆ ಹೇಳಬೇಕು. ನಾವು ಪಾಕಿಸ್ತಾನಕ್ಕೋ ಬಾಂಗ್ಲಾದೇಶಕ್ಕೋ ಹೋಗಬೇಕೇ ಎಂದು ಟಿಕಾಯತ್ ಪ್ರಶ್ನಿಸಿದರು.

Leave a Reply