ಶಿಮ್ಲಾ: ಕರ್ತವ್ಯನಿರತ ಮಹಿಳಾ ಪೊಲೀಸ್ ಪೇದೆಗೆ ಹೊಡೆದ ಕಾಂಗ್ರೆಸ್‌ ಶಾಸಕಿಯೊಬ್ಬರಿಗೆ ತಿರುಗಿ ಪೇದೆಯೂ ಕಪಾಲ ಮೋಕ್ಷ ಮಾಡಿದ ಘಟನೆ ಹಿಮಾಚಲ ಪ್ರದೇಶದ ರಾಜಧಾನಿಯಲ್ಲಿ ನಡೆದಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಶಿಮ್ಲಾದಲ್ಲಿ ಪರಾಮರ್ಶೆ ಸಭೆ ನಡೆಸುತ್ತಿದ್ದರು. ಅಲ್ಲಿಗೆ ಪ್ರವೇಶಿಸಲು ಕಾಂಗ್ರೆಸ್ ಶಾಸಕಿ ಆಶಾ ಕುಮಾರಿ ಮುಂದಾದಾಗ ಕರ್ತವ್ಯನಿರತ ಮಹಿಳಾ ಪೇದೆ ಅವರನ್ನು ತಡೆದಿದ್ದಾರೆ. ಕೋಪದಿಂದ ಆಶಾ ಅವರು ಪೇದೆಯ ಕೆನ್ನೆಗೆ ಹೊಡೆದಿದ್ದು, ಪ್ರತಿಕ್ರಿಯೆಯಾಗಿ ಮಹಿಳಾ ಪೇದೆಯೂ ಶಾಸಕಿಗೆ ಕಪಾಳಮೋಕ್ಷ ಮಾಡಿದ ವಿಡಿಯೊ ವೈರಲ್ ಆಗಿದೆ.

Leave a Reply