ರಾಜ್‌ಕೋಟ್: 64 ವರ್ಷ ವಯಸ್ಸಿನ ತನ್ನ ತಾಯಿಯನ್ನು ವಸತಿ ಕಟ್ಟಡದ ಟೆರೇಸಿನಿಂದ ತಳ್ಳಿ ಕೊಂದ 36 ವರ್ಷ ಪ್ರಾಯದ ಸಹಾಯಕ ಪ್ರಾಧ್ಯಾಪಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್‌ಕೋಟ್ ಸ್ಥಳೀಯ ಫಾರ್ಮಸಿ ಕಾಲೇಜಿನಲ್ಲಿ ಕಲಿಸುತ್ತಿರುವ ಆರೋಪಿ ಸಂದೀಪ್ ನಾಥ್ವಾನಿ, ಸೆಪ್ಟೆಂಬರ್ 29 ರಂದು ತನ್ನ ತಾಯಿ ಜಯಶ್ರೀಬೆನ್ ಅವರನ್ನು ಆಕೆಯ ಅನಾರೋಗ್ಯ ನಿಮಿತ್ತ ಬೇಸತ್ತು ತಳ್ಳಿ ಕೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ತನ್ನ ತಾಯಿ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದು, ಟೆರೇಸಿನಿಂದ ಕಾಲು ಜಾರಿ ಬಿದ್ದದ್ದು ಎಂದು ಆರೋಪಿ ಮೊದಲಿಗೆ ಹೇಳಿದ್ದರು.

ಆದಾಗ್ಯೂ, ಪೊಲೀಸರು ಅಜ್ಞಾತ ವ್ಯಕ್ತಿಯ ದೂರಿನನ್ವಯು ತನಿಖೆ ಮುಂದುವರೆಸಿದರು. ಸಿಸಿ ಟಿವಿ ಮೂಲಕ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿ ಮಗ ಮೊದಲಿಗೆ ತನ್ನ ಕೃತ್ಯವನ್ನು ನಿರಾಕರಿಸಿದ್ದು, ನಂತಹ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply