ಪಬ್ ಜಿ ಪಾರ್ಟ್ನರ್ ಜತೆ ಇರಲಿಕ್ಕಾಗಿ 19 ವರ್ಷದ ಹುಡುಗಿ ಪತಿಯಿಂದ ವಿಚ್ಛೇದನ ಕೇಳಿದ್ದು,ಹೆಲ್ಪ್ ಲೈನ್ ನಲ್ಲಿ ಸಹಾಯ ಕೋರಿದ್ದಾಳೆ.
ಅಹ್ಮದಾಬಾದ್ ನಲ್ಲಿ ಒಂದು ಮಗುವಿನ ತಾಯಿ ವಿಮೆನ್ ಹೆಲ್ಪ್ ಲೈನ್ ನಂಬರ್ ‘181’ಗೆ ಕರೆ ಮಾಡಿ ಪತಿಯಿಂದ ವಿಚ್ಛೇದನ ಪಡೆಯಲು ನೆರವು ಕೋರಿದ್ದು,ತಾನು ಚಾಟಿಂಗ್ ಮಾಡುತ್ತಿರುವ ಪಬ್ಜಿ ಪಾರ್ಟ್ನರ್ ಜತೆ ಜೀವಿಸಲು ಬಯಸಿದ್ದಾಳೆ.
ಹೆಲ್ಪ್ ಲೈನ್ ಮಾಹಿತಿ ಪ್ರಕಾರ,ಪಬ್ಜಿ ಪಾರ್ಟ್ನರ್ ಜತೆಗೆ ನಿಕಟವಾದ ಬಗ್ಗೆ ಪತಿಪತ್ನಿಯ ನಡುವೆ ವಾಗ್ವಾದ ನಡೆದಿದ್ದು ಪತ್ನಿ ತವರಿಗೆ ಹೊರಟು ಹೋಗಿದ್ದಳು.

ವರದಿಯ ಪ್ರಕಾರ, “18 ವರ್ಷ ವಯಸ್ಸಿನವಳಾಗಿದ್ದಾಗ ಆಕೆಗೆ ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ವಿವಾಹವಾದರು. ಒಂದು ಮಗುವಿಗೆ ಜನ್ಮ ನೀಡಿದ ಬಳಿಕ ಕೆಲವು ತಿಂಗಳುಗಳ ಹಿಂದೆ ಅವರು PUBG ಗೆ ಆಟವಾಡಲು ತೊಡಗಿದಳು. ನಿಗದಿ ಪಡಿಸಿದ ಸಮಯದಲ್ಲಿ ಆಡಲು ತೊಡಗಿದಾಗ PUBG ಆಟಗಾರನಾಗಿದ್ದ ನಗರದ ಯುವಕನೊಂದಿಗೆ ಸಂಪರ್ಕ ಹೊಂದಿದಳು. ಇತ್ತೀಚಿಗೆ ಯುಎಇ ಯಲ್ಲಿ ಮಹಿಳೆ PUBG ಅಡಿಕ್ಷನ್ ಗೆ ಒಳಗಾಗಿ ತನ್ನ ಗಂಡನನ್ನು ತ್ಯಜಿಸಿದ್ದಳು.

Leave a Reply