ಭಾರತದಲ್ಲಿ ಪ್ರತಿವರ್ಷ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುವ ಹಾಗೂ ಲಕ್ಷ ಗಟ್ಟಲೆ ಜನರು ರೋಗ ನಿರೋಧಕ ಚುಚ್ಚುಮದ್ದು ಪಡೆಯುವ ಒಂದು ಮಾರಕ ವೈರಸ್ ಆಗಿದೆ ರೇಬಿಸ್. ಇದರಲ್ಲಿ ನಮ್ಮ ಮನೆಯಲ್ಲಿ ವಾಸಿಸುವ ಬೆಕ್ಕುಗಳ ಪಾತ್ರವೂ ಇದೆ ಎಂದರೆ ಆಶ್ಚರ್ಯವಾಗುತ್ತದಲ್ಲವೇ? ಬೆಕ್ಕುಗಳು ಕಚ್ಚುವುದು ಮಾತ್ರವಲ್ಲ ಅದು ಪರಚುವುದು ಕೂಡಾ ಅಪಾಯಕಾರಿಯಾಗಿದೆ. ಬೆಕ್ಕುಗಳು ಪದೇ ಪದೇ ಮುಂಗಾಲು ಗಳನ್ನು ನೆಕ್ಕುವುದರಿಂದ ರೋಗ ಪೀಡಿತವಾದವುಗಳ ಉಗುರು ಗಳನ್ನು ವೈರಸ್‍ಗಳು ಸೇರಿಕೊಳ್ಳುತ್ತವೆ.

ರೋಗ ಲಕ್ಷಣಗಳು ನಾಯಿಗಳಂತೆಯೇ ಇವುಗಳಲ್ಲಿ ಕಾಣುತ್ತವೆ. ಕೆಲವೊಮ್ಮೆ ಆಕ್ರೋಶಭರಿತವಾಗಿದ್ದರೆ ಇನ್ನೂ ಕೆಲವೊಮ್ಮೆ ಮೂಕವಾಗಿರುತ್ತವೆ. ರೋಗ ಆರಂಭ ಸಮಯದಲ್ಲಿ ಬೆಕ್ಕು ಅಡಗಿ ಕುಳಿತಿರುತ್ತದೆ. ಕೆಲವೊಮ್ಮೆ ಯಜಮಾನನ ಕಣ್ಣಿಗೆ ಕಾಣದಂತೆ ಎಲ್ಲೋ ಸತ್ತು ಬಿದ್ದಿರುತ್ತದೆ. ಕೆಲವೊಮ್ಮೆ ಅಡಗಿ ಕುಳಿತುಕೊಂಡ ಬೆಕ್ಕು ಅಕ್ರಮ ಸ್ವಭಾವದೊಂದಿಗೆ ಹೊರಬರುತ್ತದೆ. ಕಣ್ಣ ಮುಂದೆ ಕಾಣುವವರನ್ನೆಲ್ಲಾ ಕಚ್ಚುವುದು, ಸಿಕ್ಕಿದವುಗಳನ್ನೆಲ್ಲಾ ಪರಚುತ್ತದೆ. ನಾಲ್ಕು ದಿನ ಹೀಗೆ ಇರುತ್ತದೆ. ಗಂಟಲಿನ ನರಗಳ ಬಳಲಿಕೆಯಿಂದ ಅದರ ಸ್ವರದಲ್ಲಿ ವ್ಯತ್ಯಾಸವಿರುತ್ತದೆ. ನಂತರ ನಡೆಯಲಾರದ ಸ್ಥಿತಿ ತಲುಪಿ ಸಾಯುತ್ತದೆ. ನಾಯಿಗಳಂತೆ ಜೊಲ್ಲು ಸುರಿಸುವ ಹಾಗೂ ಕೆಳ ದವಡೆಯ ಕ್ಷೀಣತೆ ಬೆಕ್ಕಿನಲ್ಲಿ ಕಂಡು ಬರುವುದು ಕಡಿಮೆ.

ರೋಗ ನಿರೋಧಕ ಚುಚ್ಚುಮದ್ದನ್ನು ಮೂರು ತಿಂಗಳಾಗುವಾಗ ಬೂಸ್ಟರ್ ಚುಚ್ಚು ಮದ್ದು ನಾಲ್ಕು ತಿಂಗಳಾಗುವಾಗ ಚುಚ್ಚಬೇಕು. ನಂತರ ವರ್ಷಕ್ಕೊಮ್ಮೆ ಈ ಚುಚ್ಚುಮದ್ದನ್ನು ನೀಡಬೇಕು.

ಮನೆಯಲ್ಲಿ ಬೆಳೆಯುವ ಬೆಕ್ಕು ನಿಮ್ಮನ್ನು ನೆಕ್ಕುವುದರಿಂದ ತಡೆಯಬೇಕು.

Leave a Reply