ಚೆನ್ನೈ: ತಮಿಳು ಸೂಪರ್‌ ಸ್ಟಾರ್ ರಜನೀಕಾಂತ್ ಇತ್ತೀಚೆಗೆ ರಾಜಕೀಯ ಪ್ರವೇಶ ಮಾಡಿದ ಹೇಳಿಕೆ ನೀಡಿದ್ದು, ನಾನು ಕನ್ನಡಿಗ. ಕನ್ನಡ ಪತ್ರಿಕೆಯೊಂದರಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ಮಾಡಿದ್ದೆ. ನಾನೊಬ್ಬ ಪತ್ರಕರ್ತ ಎಂದು ಹೇಳಿಕೊಂಡಿದ್ದಾರೆ.

ತಾನು ಸಂಯುಕ್ತ ಕರ್ನಾಟಕದಲ್ಲಿ ಪ್ರೂಫ್ ರೀಡರ್ ಆಗಿ ಸ್ವಲ್ಪ ದಿನ ಕೆಲಸ ಮಾಡಿದ್ದೆ. ನಾನು ಮೊದಲ ಸಂದರ್ಶನ ನೀಡಿದ್ದು ಬೊಮ್ಮಾಯಿ ಪತ್ರಿಕೆಗೆ ಎಂದು ಹೇಳಿದ್ದಾರೆ.

ನಿಜವಾಗಿ ರಜನಿಕಾಂತ್ ಸ್ನೇಹಿತ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಭೇಟಿ ಮಾಡಲು ಬರುತ್ತಿದ್ದ ಅವರು, ಸ್ನೇಹಿತನಿಗೆ ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಯಾವುದೇ ಸಂಬಳ ಇರಲಿಲ್ಲ. ನಮ್ಮ ಪತ್ರಿಕೆ ಬಗ್ಗೆ ಅವರ ಉಲ್ಲೇಖ ಖುಷಿ ನೀಡಿದೆ. ಅವರನ್ನು ಸಂಸ್ಥೆಗೆ ಆಮಂತ್ರಿಸುತ್ತೇವೆ ಎಂದು ಸಂಯುಕ್ತ ಕರ್ನಾಟಕದ ಆಡಳಿತ ಮಂಡಳಿ ಹೇಳಿದೆ

Leave a Reply