ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಮಾಡಿದ ಟ್ವೀಟ್‍ಗಾಗಿ ಕಾಂಗ್ರೆಸ್ ನಾಯಕಿ ದಿವ್ಯಸ್ಪಂದನ ವಿರುದ್ಧ ದೇಶದ್ರೋಹ ಕೇಸು ಹಾಕಲಾಗಿದೆ. ಉತ್ತರಪ್ರದೇಶದ ಗೋಮತಿನಗರ್ ಪೊಲೀಸರು ರಮ್ಯ ವಿರುದ್ಧ ಕೇಸು ಹಾಕಿದ್ದಾರೆ.

ಮೋದಿಯ ಫೋಟೊ ಶಾಪ್ ಮಾಡಿದ ಫೋಟೊವನ್ನು ದಿವ್ಯ ಸ್ಪಂದನ ಟ್ವೀಟ್ಗೆ ಬಳಸಿದ್ದರು. ಫೋಟೊದಲಿ ಮೋದಿ ತನ್ನ ಮೇಣದ ಪ್ರತಿಮೆಯಲ್ಲಿ ಚೋರ್ ಎಂದು ಬರೆಯುವ ರೀತಿಯಲ್ಲಿ ಈ ಫೋಟೊ ಇದೆ. ಚೋರ್ ಪ್ರಧಾನಿ ಮಾತಾಡಬೇಡಿ ಎಂದು ಹ್ಯಾಷ್ ಟ್ಯಾಗಿನೊಂದಿಗೆ ಫೋಟೊ ಶೇರ್ ಮಾಡಿದ್ದರು.

ಇನ್ಫಾರ್ಮೆಶನ್ ಟೆಕ್ನಾಲಜಿಯ ಸೆಕ್ಷನ್ 67, ಐಪಿಸಿ ಕಲಂ 124ಎ(ದೇಶದ್ರೋಹ) ಪ್ರಕಾರ ರಮ್ಯಾ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಲಕ್ನೊದ ವಕೀಲ ರಿಝ್ವಾನ್ ಅಹ್ಮದ್ ನೀಡಿದ ದೂರಿನಾಧಾರದಲ್ಲಿ ಕೇಸು ದಾಖಲಾಗಿದೆ.

Leave a Reply