ರಮಝಾನ್ ಉಪವಾಸ ವೃತವನ್ನು ಮುಸ್ಲಿಮರು ಶ್ರದ್ಧೆಯಿಂದ ಆಚರಿಸುತ್ತಾರೆ. ಒಂದು ಗುಟುಕು ನೀರು ಕುಡಿಯದೆ ಉಪವಾಸವನ್ನು ಈಡೇರಿಸಿ ಧರ್ಮವಿಧಿಯನ್ನು ನೆರವೇರಿಸುತ್ತಾರೆ. ಆದರೆ 26 ವರ್ಷದ ಮುಹಮ್ಮದ್ ಪನಾವುಲ್ಲಾ ಅಹ್ಮದ್ ಎಂಬ ಯುವಕ ಇನ್ನೊಬ್ಬರ ಜೀವ ಉಳಿಸಲಿಕ್ಕಾಗಿ ಉಪವಾಸ ವೃತ ತೊರೆದು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ತನ್ನ ರೂಮ್ ಮೇಟ್ ತಪಶ್ ಒಂದು ರೀತಿಯ ಬೇಸರದಲ್ಲಿದ್ದಂತೆ ಪನಾವುಲ್ಲಾ ಗಮನಿಸಿದರು. ಗುವಾಹಟಿಯಲ್ಲಿ ಹ್ಯುಮ್ಯಾನಿಟಿ ಎಂಬ ಸ್ವಯಂಪ್ರೇರಿತ ರಕ್ತದಾನಿಗಳ ಗುಂಪಿನಲ್ಲಿ ತಪಶ್‍ ಭಗವತಿ ಯೊಂದಿಗೆ ಕುಟುಂಬವೊಂದು ರಕ್ತದ ಅವಶ್ಯಕತೆ ಇದೆ ಎಂದು ವಿನಂತಿಸಿದ್ದರು.

ಆ ಕುಟುಂಬ ಹಲವು ಕಡೆ ಪ್ರಯತ್ನಿಸಿತ್ತು. ರಂಜನ್ ಗೋಗಾಯ್‍ ಎಂಬ ಉದ್ಯಮಿ ಹೊಟ್ಟೆಯಲ್ಲಿ ಗಡ್ಡೆಗಳು ಪತ್ತೆಯಾಗಿದ್ದವು. ಹೀಗಾಗಿ ಅವರು ಶಸ್ತ್ರ ಚಿಕಿತ್ಸೆಗೆ ರಕ್ತದ ಅವಶ್ಯಕತೆ ಇತ್ತು. ಅವರಿಗೆ ಓ ಪಾಸಿಟಿವ್ ರಕ್ತದ ಅವಶ್ಯಕೆತೆ ಇತ್ತು. ಕೊನೆಗೆ ತಪಶ್ ತನ್ನ ಸ್ನೇಹಿತನಲ್ಲಿ ಕೇಳಿದಾಗ ಆತ ರಕ್ತ ನೀಡಲು ತಯಾರಾದನು.

Ahmed (left) donated blood after breaking Ramzan fast. (HT Photo)

ಉಪವಾಸಇದ್ದು ರಕ್ತದಾನ ಮಾಡಬಹುದೇ ಎಂದು ಆತ ಮೌಲ್ವಿಯಲ್ಲಿ ಕೇಳಿದಾಗ, ಮತ್ತೊಬ್ಬರ ಪ್ರಾಣ ಉಳಿಸಲು ರಕ್ತ ನೀಡಬೇಕು ಮತ್ತು ಅದಕ್ಕಾಗಿ ಉಪವಾಸ ಮುರಿಯಬಹುದು ಎ ಎಂದು ಅವರು ಸಲಹೆ ಕೊಟ್ಟಿದ್ದಾರೆ. ಬಳಿಕ ಗೊಗೋಯ್ ಎಂಬ ಉದ್ಯಮಿಗಾಗಿ ಅವರು ರಕ್ತದಾನ ಮಾಡಿದರು. ತಪಶ್ ಹಲವು ಕಡೆ ರಕ್ತಕ್ಕಾಗಿ ವಿಚಾರಿಸಿದಾಗ ಅವರಿಗೆ ನಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತು ಎಂದು ಅವರು ಹೇಳಿದರು. ಇಂತಹ ಸನ್ನಿವೇಶದಲ್ಲೂ ರಕ್ತದಾನ ಮಾಡಿದ ಪಾನಾವುಲ್ಲ ರಿಗೆ ಗೊಗೋಯ್ ಕುಟುಂಬ ಕೃತಜ್ಞತೆ ಸಲ್ಲಿಸಿದ್ದು, ಪಾನಾವುಲ್ಲ ರಿಗೆ ಅವರ ಕುಟುಂಬ ರಕ್ತದ ಈ ಸೇವೆಗೆ ದೇಣಿಗೆ ನೀಡಲು ಮುಂದಾದಾಗ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದರು.

” ಉಪವಾಸ ಮುರಿದು ರಕ್ತದಾನ ಮಾಡಿ ಹಣ ಪಡೆಯಲು ನಿರಾಕರಿಸಿದಾಗ ನನಗೆ ನಿಜಕ್ಕೂ ಆಶ್ಚರ್ಯ ಹೆಮ್ಮೆ ಆಯಿತು ಎಂದು ಗೊಗೋಯ್ ಸಹೋದರ ಬಿನೋದ್ ಬೈಶ್ಯ ಹೇಳಿದ್ದಾರೆ.

Representational Image

ಗೊಗೊಯ್ ರವರ ಹೊಟ್ಟೆಯಲ್ಲಿರುವ ಎರಡೂ ಗೆಡ್ಡೆಗಳನ್ನು ವೈದ್ಯರು ತೆಗೆದುಹಾಕಿದ್ದು ಅದರಲ್ಲಿ ಕ್ಯಾನ್ಸರ್ ಕಣಗಳಿವೆಯೇ ಎಂದು ಪರೀಕ್ಷಿಸುತ್ತಾರೆ. ರೋಗಿಯು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರೆ, ಅಹ್ಮದ್ ತನ್ನ ರಾಮ್ಝಾನ್ ಉಪವಾಸವನ್ನು ಮುಂದುವರೆಸಿದ್ದಾರೆ.

Leave a Reply