ಹೈಸ್ಕೂಲಿನಲ್ಲಿದ್ದಾಗ ನನ್ನಲ್ಲಿ ಮೂಡುತ್ತಿದ್ದ ಅದ್ಭುತ ಶಕ್ತಿಯನ್ನು ಅದುಮಿಡು ವುದು ಅಸಾಧ್ಯವಾಗಿತ್ತು. ಈ ಅದಮ್ಯ ಒತ್ತಡವೇ ನನ್ನ ಕಲ್ಪನೆಯ ಚಿತ್ರಗಳನ್ನು ಮಲಗುವ ಕೋಣೆಯ ಗೋಡೆಗಳ ಮೇಲೆ ಚಿತ್ರಿಸುವಂತೆ ಪ್ರಚೋದಿಸಿತ್ತು. ಇದಕ್ಕೆ ಪೋಷಕರ ಅನುಮತಿ ಕೇಳಿದೆ. “ಯಾವ ರೀತಿಯ ಚಿತ್ರಗಳು?” ಎಂದವರು ಕೇಳಿದರು. “ಯಾವುದು ನನಗಿಷ್ಟವೋ ಅದು. ಯಾವುದು ಚೆನ್ನಾಗಿದೆ ಅನ್ನಿಸುತ್ತದೋ ಅದು” ಎಂದೆ.
ನನ್ನ ತಂದೆಗೆ ಇಷ್ಟೇ ಸಾಕಿತ್ತು. ಅದೇ ಅವರ ದೊಡ್ಡತನ. ನನ್ನನ್ನು ನೋಡಿ ಮುಗುಳ್ನಕ್ಕರು. ನನ್ನ ಸೃಜನಾತ್ಮಕ (Creative) ಕಲ್ಪನೆಗೆ ಉತ್ತೇಜನ ನೀಡಿದರು. ಅವರು ನನ್ನನ್ನು ಮತ್ತು ನನ್ನ ಪ್ರತಿಭೆಯನ್ನು ಅಸಾಂಪ್ರದಾಯಿಕ ರೀತಿಯಲ್ಲಿ ವ್ಯಕ್ತಪಡಿಸುವುದನ್ನು ಇಷ್ಟಪಟ್ಟಿದ್ದರು. ಆದ್ದರಿಂದ ಚಿತ್ರಗಳನ್ನು ಗೋಡೆಯ ಮೇಲೆ ಮೂಡಿಸುವ ನನ್ನ ಸಾಹಸವನ್ನು ಒಂದು ಅದ್ಭುತ ಕಲ್ಪನೆಯೆಂದೇ ಮೆಚ್ಚಿಕೊಂಡರು. ಮೊದಲು ತಾಯಿಗೆ ನನ್ನ ಸಾಹಸ ಇಷ್ಟ ವಾಗದಿದ್ದರೂ ನನ್ನ ಉತ್ಸಾಹವನ್ನು ನೋಡಿ ಬೆಂಬಲಕ್ಕೆ ನಿಂತಳು. ಎರಡು ದಿನಗಳ ಕಾಲ ಟಾಮಿ ಮತ್ತು ಜಾಕ್ ಶರೀಫ್ ಜೊತೆಗೂಡಿ ಮಲಗುವ ಕೋಣೆ ತುಂಬಾ ಚಿತ್ರಗಳನ್ನು ಬಿಡಿಸಿದೆ. ತಂದೆ-ತಾಯಿ ಕೋಣೆಯನ್ನು ಗಮನಿಸುತ್ತಿದ್ದರು. ಆ ಕೋಣೆ ನಮ್ಮ ಮೂವರನ್ನು ಹೊರತು ಪಡಿಸಿ ಮಿಕ್ಕೆಲ್ಲರಿಗೂ ಮುಚ್ಚಲ್ಪಟ್ಟಿತ್ತು. ಬೀಜ ಗಣಿತ, ವರ್ಗ ಸಮೀಕರಣ ಚಿತ್ರ, ಚದು ರಂಗ ಕಾಯಿಗಳ ಚಿತ್ರ, ಮೀನಿನ ರೆಕ್ಕೆಯಾಕಾರದ ಸರಳ ರಾಕೆಟ್ ಚಿತ್ರ ಹೀಗೆ ವಿವಿಧ ಚಿತ್ರಗಳನ್ನು ಬಿಡಿಸಿದ್ದೆವು. 1970ರ ದಶಕ ದಲ್ಲಿ ಕೋಣೆಯ ಬಾಗಿಲಿನ ಮೇಲೆ `ಡಿಸ್ಕೊ ಸೆಕ್ಸ್’ ಎಂದು ಬರೆದೆ. ನನ್ನ ತಾಯಿಗೆ ಇದು ಅಶ್ಲೀಲ ಭಾಷೆ ಎನಿಸಿತು. ಮಾರನೇ ದಿನ ನಾನು ಮನೆಯಲ್ಲಿಲ್ಲದಾಗ `ಸೆಕ್ಸ್’ ಪದಕ್ಕೆ ಬಣ್ಣ ಹಚ್ಚಿದ್ದಳು. ನಾವು ಬರೆದ ಚಿತ್ರಗಳಲ್ಲೆಲ್ಲಾ ಅದೊಂದೇ ಬದ ಲಾವಣೆ ಆಕೆ ಮಾಡಿದ್ದು. ಇಷ್ಟೆಲ್ಲಾ ಚಿತ್ರ ಗಳಿದ್ದರೂ ದಶಕಗಳವರೆಗೆ ತಂದೆ-ತಾಯಿ ಕೋಣೆಗೆ ಬಣ್ಣ ಬಳಿಯಲಿಲ್ಲ. ಮನೆಗೆ ಬರುವವರಿಗೆ ನನ್ನ ಕೊಠಡಿ ಆಕರ್ಷಣೆಯ ಕೇಂದ್ರವಾಗಿತ್ತು.

ರಾಂಡಿ ಪಾಶ್ ಅಮೇರಿಕದ ಕಾರ್ನಿಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ 1988 ರಿಂದ 1997ರ ವರೆಗೆ ಕಂಪ್ಯೂಟರ್ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದರು. ಅಡೋಬ್, ಗೂಗಲ್, ಇಲೆಕ್ಟ್ರಾನಿಕ್ಸ್ ಆರ್ಟ್ ಮಾತ್ರವಲ್ಲ, ಮಕ್ಕಳು ಹೆಚ್ಚು ಇಷ್ಟಪಡುವ `ವಾಲ್ಟ್‍ಡಿಸ್ನಿ’ ಎಂಬ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು. ತಮ್ಮ 47ನೇ ವಯಸ್ಸಿನಲ್ಲಿ ಕ್ಯಾನ್ಸರ್‍ನಲ್ಲಿ ನಿಧನರಾದ ಅವರು ಕೃತಿಯಲ್ಲಿ ಹೇಳುತ್ತಾರೆ, “ನಿಮ್ಮ ಮಕ್ಕಳು ಅವರು ಮಲಗುವ ಕೊಠಡಿಯಲ್ಲಿ ಗೋಡೆಗಳ ಮೇಲೆ ಚಿತ್ರ ಗಳನ್ನು ಬಿಡಿಸಲು ಇಚ್ಛೆ ಪಟ್ಟರೆ ದಯ ಮಾಡಿ ಅವರಿಗೆ ಹಾಗೆ ಮಾಡಲು ಬಿಡಿ. ಮನೆಯ ಮಾರಾಟದ ಮೌಲ್ಯದ ಬಗ್ಗೆ ಯೋಚಿಸಬೇಡಿ. ಇದು ನನಗೆ ನೀವು ಮಾಡುವ ಉಪಕಾರವೇ ಸರಿ.”

Leave a Reply