ಬುಲಂದ್ ಶಹರ್ನಲ್ಲಿ 16 ವರ್ಷ ವಯಸ್ಸಿನ ಹುಡುಗಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಅಪರಾಧದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಜುಲ್ಫಿಕಾರ್ ಅಬಾಸಿ ಮತ್ತು ದಿಲ್ಶಾದ್ ಯುವಕರು ಅಪರಾಧದ ದಿನದಂದು ಚಲನಚಿತ್ರವೊಂದನ್ನು ವೀಕ್ಷಿಸಿ, ಆಲ್ಕೋಹಾಲ್ ಸೇವಿಸಿ”ವಿನೋದಕ್ಕಾಗಿ” ಹುಡುಗಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಹುಡುಗಿ ಟ್ಯೂಷನ್ ಹೋಗಿ ಬರುತ್ತಿದ್ದು, ಅವರು ತಮ್ಮ ಕಾರಿನಲ್ಲಿ ಚಂದಪುರದ ಗ್ರಾಮದ ಸಮೀಪ ಅತ್ಯಾಚಾರ ಮಾಡಿ ಆ ರಾತ್ರಿಯ ನಂತರ ಅಗ್ರೇಟರ್ ನೋಯ್ಡಾದ ಬಿಲ್ ಅಕ್ಬರ್ಪುರದ ಹಳ್ಳಿಯ ಒಂದು ಕಾಲುವೆಯೊಂದರಲ್ಲಿ ಎಸೆದು ಪರಾರಿ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲಿಗೆ ಹೆತ್ತವರು ತಮ್ಮ ಮಗಳ ಮೇಲೆ ಅನಾಹುತ ಆಗಿದೆ ಎಂದು ಘಟನಾ ಸ್ಥಳದಲ್ಲಿ ಕಂಡ ಶಾಲಾ ಬ್ಯಾಗ್ ತೋರಿಸಿ ಪೊಲೀಸರಿಗೆ ಹೇಳಿದ್ದರು. ಆದರೆ ಇದೊಂದು ಪ್ರೀತಿ ಪ್ರಣಯದ ವಿಷಯ ಆಗಿರಬಹುದು ಎಂದು ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದ್ದರು.

Leave a Reply