ಈ ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ ರತನ್ ಟಾಟಾ ಜರ್ಮನಿಯಲ್ಲಿ ತಮಗೆ ಎದುರಾದ ಒಂದು ಸನ್ನಿವೇಶವನ್ನು ಹೇಳುತ್ತಾರೆ.
ಒಂದು ಸಾರಿ ನಾವು ಜರ್ಮನಿಗೆ ಹೋಗಿದ್ದೆವು. ಅದು ಪ್ರಪಂಚದ ಅಭಿವೃದ್ದಿ ದೇಶಗಳಲ್ಲಿ ಒಂದು. ಹಂಬರ್ಗ್‌ನಲ್ಲಿ ಊಟ ಮಾಡಲು ಅಲ್ಲಿನ ಹೋಟೆಲ್‌ಗೆ ಹೋದೆವು. ಬಹಳ ಟೇಬಲ್ ಖಾಲಿ ಇವೆ. ನಮಗೆ ಆಶ್ಚರ್ಯವಾಯಿತು. ಅಲ್ಲಿ ಎಲ್ಲರೂ ಒಂದು-ಎರಡು ಊಟ ತರಿಸಿಕೊಂಡು ಪ್ಲೇಟ್ ಪೂರ್ತಿ ಖಾಲಿ ಮಾಡಿ ಹೋಗುತ್ತಿದ್ದಾರೆ. ಒಂದು ಮೂಲೆಯ ಟೇಬಲ್‌ನಲ್ಲಿ ವೃದ್ದರು ಒಂದೇ ಊಟ ತರಿಸಿಕೊಂಡು ಪ್ಲೇಟ್ ಪೂರ್ತಿ ಖಾಲಿ ಮಾಡಿ ಹೋಗುತ್ತಿದ್ದಾರೆ. ಒಂದು ಮೂಲೆಯ ಟೇಬಲ್‌ನಲ್ಲಿ ವೃದ್ದರು ಒಂದೇ ಊಟ ತರಿಸಿಕೊಂಡು ಅದನ್ನು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದರು. ನಮಗೆ ಶ್ರೀಮಂತ ದೇಶದಲ್ಲಿ ಹೀಗೆ ತಿನ್ನುತ್ತಿದ್ದರಲ್ಲ ಎನ್ನಿಸಿತು.


ನಾವು ನಮ್ಮ ಸ್ಟೇಟಸ್‌ಗೆ ತಕ್ಕಂತೆ ತರತರದ ತಿನಿಸುಗಳನ್ನು ತರಿಸಿಕೊಂಡು ತಿಂದೆವು. ನಮ್ಮವರು ಕೆಲವು ತಿನಿಸು ಇಷ್ಟ ವಾಗಲಿಲ್ಲವೆಂದು ಜಾಸ್ತಿ ಆಯಿತೆಂದು ಆಹಾರವನ್ನು ಪ್ಲೇಟ್ ನಲ್ಲಿಯೇ ಬಿಟ್ಟರು.!!
ನಾವು ಅಲ್ಲಿಂದ ಹೊರಡುವ ಸಮಯದಲ್ಲಿ ವೃದ್ದ ಮಹಿಳೆ ಯೊಬ್ಬರು ನಮ್ಮ ಬಳಿ ಬಂದು ಹಾಗೆ ವೇಸ್ಟ್ ಮಾಡಬಾರದು ಅದು ನಮ್ಮ ಆಹಾರ ಎಂದಳು.!!

ನಮ್ಮವರು ಅದು ನಿಮ್ಮಿಷ್ಟ ಎಂದರು. ತಕ್ಷಣ ಫೋನ್ ತೆಗೆದು ಆಕೆ ಯಾರಿಗೋ ಫೋನ್ ಮಾಡಿದಳು. ಪೊಲೀಸರು ಬಂದರು. ನಡೆದಿದ್ದನ್ನು ಕೇಳಿದರು. ನಮಗೆ 50 ಯೂರೋ ದಂಡ ಹಾಕಿದರು. ಮರು ಮಾತನಾಡದೇ ಕಟ್ಟಿ ಬಂದೆವು.
ಅವರು ಹೇಳಿದರು, “ಹಣ ನಿಮ್ಮದು ಅಷ್ಟೇ, ಇಲ್ಲಿಯ ಸಂಪನ್ಮೂಲಗಳಲ್ಲ. ಇನ್ನೊಬ್ಬನು ತಿನ್ನುವುದನ್ನು ನೀವು ಹಾಳು ಮಾಡಿದ್ದೀರಿ. ದೇಶದ ಸಂಪತ್ತನ್ನು ನಷ್ಟ ಮಾಡುವ ಹಕ್ಕು ನಿಮಗಿಲ್ಲ.”

ನಾವು ಮದುವೆ ಸಮಾರಂಭಗಳನ್ನು ಸ್ಟೇಟಸ್ ಎಂಬ ಹೆಸರಿನಲ್ಲಿ ಎಷ್ಟು ಆಡಂಬರದಿಂದ ಮಾಡುತ್ತೇವೆ. ಇದು ನಮಗೆ ಒಂದು ಪಾಠವಲ್ಲವೇ? ಇದರಿಂದ ನಾವು ಕಲಿಯೋಣ.!

 

Leave a Reply