ವಿಶ್ವಕಪ್ ಕ್ರಿಕೆಟ್ ನಲ್ಲಿ ರಿಷಬ್ ಪಂತ್ ರ ಬದಲಿಗೆ ದಿನೇಶ್ ಕಾರ್ತಿಕ್ ರನ್ನು ಯಾಕೆ ಆಯ್ಕೆ ಮಾಡಲಾಯಿತು ಎಂದು ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸುದ್ದಾರೆ.  ದಿನೇಶ್ ಕಾರ್ತಿಕ್ ರವರ ಏಕದಿನ ಪಂದ್ಯದ ಅನುಭವದ ಆಧಾರದಲ್ಲಿ ಅವರನ್ನು 2019 ರ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಹೆಚ್ಚು ಅನುಭವವಿದೆ. ಒಂದು ವೇಳೆ ಧೋನಿಗೆ ಏನಾದರೂ ಆದರೆ (ದೇವರು ಹಾಗೆ ಮಾಡದಿರಲಿ) ಕಾರ್ತಿಕ್ ವಿಕೆಟ್ ಕೀಪರ್ ಮತ್ತು ಫಿನಿಶರ್ ಆಗಿ ಮಹತ್ವದ ಪಾತ್ರ ನಿರ್ವಹಿಸುವರು. ದಿನೇಶ್ ಕಾರ್ತಿಕ್ ರ ಅನುಭವ ಮತ್ತು ಯಾವುದೇ ರೀತಿಯ ಒತ್ತಡವನ್ನು ನಿಭಾಯಿಸಿಕೊಂಡು ಆಡುವ ಆವರ ಕೌಶಲ್ಯತೆಯೇ ಅವರನ್ನು ತಂಡಕ್ಕೆ ಆಯ್ಕೆ ಮಾಡುವಂತೆ ಮಾಡಿದೆ ಎಂದು ಕೊಹ್ಲಿ ಹೇಳಿದ್ದಾರೆ. ಎಂದು ಕೊಹ್ಲಿ ಅಭಿಪ್ರಾಯ ಪಟ್ಟರು…

“ರಿಷಭ್‌ ಪಂತ್‌ ಹಾಗೂ ದಿನೇಶ್‌ ಕಾರ್ತಿಕ್‌ ಇಬ್ಬರೂ ಎಂ.ಎಸ್‌ ಧೋನಿ ಅವರಿಗೆ ಪರ್ಯಾಯ ವಿಕೆಟ್‌ ಕೀಪರ್‌ಗಳು. ಇವರಿಬ್ಬರೂ ಅದ್ಭುತ ಆಟಗಾರರು. ಆದರೆ, ವಿಕೆಟ್‌ ಕೀಪಿಂಗ್‌ ಕೌಶಲವನ್ನು ಪರಿಗಣಿಸಿ ಹಿರಿಯ ಆಟಗಾರನಿಗೆ ಮಣೆ ಹಾಕಲಾಗಿದೆ. ಪಂತ್‌ಗೆ ಇನ್ನೂ ಸಾಕಷ್ಟು ಅವಕಾಶಗಳಿವೆ” ಎಂದು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್‌.ಕೆ ಪ್ರಸಾದ್‌ ಅವರು ದಿನೇಶ್‌ ಕಾರ್ತಿಕ್‌ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.

Leave a Reply