ಇವತ್ತು ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಅವರ ಹುಟ್ಟಿದ ಹಬ್ಬ. ಅಭಿಮಾನಿಗಳು ತಂದ ಕೇಕನ್ನು ತಮ್ಮ ಕತ್ರಿಗುಪ್ಪೆ ನಿವಾಸದಲ್ಲಿ ‌ಅಭಿಮಾನಿಗಳ ಸಮ್ಮುಖದಲ್ಲೇ ಕತ್ತರಿಸುವ ಮೂಲಕ ಹುಟ್ಟಿದ ಹಬ್ಬವನ್ನು ಯಶ್ ಆಚರಿಸಿದರು. ನಿನ್ನೆ ಸಂಜೆಯಿಂದಲೇ ಯಶ್ ಅವರಿಗೆ ಶುಭಾಶಯ ತಿಳಿಸಲು ರಾಜ್ಯದ ನಾನಾ ಭಾಗದಿಂದ ಜನ ಬಂದು ಯಶ್ ನಿವಾಸದ ಮುಂದೆ ಜಮಾಯಿಸಿದ್ದರು.

ಇದೇ ವೇಳೆಯಲ್ಲಿ ಯಶ್ ಅಭಿನಯದ ಅದ್ಧೂರಿ ವೆಚ್ಚದ ಕೆಜಿಎಫ್ ಸಿನಿಮಾದ ಟ್ರೀಸರ್ ಕೂಡ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡಿದ್ದು ಭಾರೀ ಪ್ರತಿಕ್ರಿಯೆ ದೊರಕಿದೆ.‌ ಪೋಸ್ಟರ್ ಹಾಗು ಟೀಸರ್‌ ಮೂಲಕ ಚಿಂದಿ ಉಡಾಯಿಸಿರುವ ಈ ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.‌ ಕೆಜಿಎಫ್ ಚಿತ್ರದಲ್ಲಿ ಯಶ್ ಕೂದಲು, ಗಡ್ಡ ಬಿಟ್ಟು ಬಿಟ್ಟು ಖೈದಿಯ ಪಾತ್ರದಲ್ಲಿ ಕಾಣಿಸುತ್ತಿರುವ ಪೋಸ್ಟರ್ ಈಗಾಗಲೇ ಭಾರಿ ಸದ್ದು ಮಾಡಿದೆ.

Leave a Reply