ರಾಷ್ಟ್ರೀಯ ಸ್ವಯಂಸೇವಕ ಸಂಘವು 2019 ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದೆ.
ಮುಂದಿನ ಚುನಾವಣೆಯಲ್ಲಿ ನಿರುದ್ಯೋಗ ಮತ್ತು ರೈತರ ಸಮಸ್ಯೆಗಳು ಬಿಜೆಪಿಗೆ ಬೃಹತ್ ಪ್ರಮಾಣದಲ್ಲಿ ಪ್ರಭಾವ ಬೀರಬಹುದು ಎಂಬ ಭಯವನ್ನು ಸಂಘವು ಉಲ್ಲೇಖಿಸಿದೆ.
ಈ ಎರಡು ವಿಷಯಗಳ ಬಗ್ಗೆ ಆರೆಸ್ಸೆಸ್ ಬಿಜೆಪಿಗೆ ಎಚ್ಚರಿಸುತ್ತಲೇ ಇದೆಯೆಂದು ಭಾರತೀಯ ಮಜ್ದೂರ್ ಸಂಘದ ನೇತಾರರೊಬ್ಬರು ಟೆಲಿಗ್ರಾಫ್ಗೆ ಹೇಳಿದ್ದಾರೆ.
ಒಂದು ವೇಳೆ ಸರಕಾರ ನಮ್ಮ ಮಾತು ಕೇಳಿದ್ದಿದ್ದರೆ ಗುಜರಾತಿನಲ್ಲಿ ಪಕ್ಷಕ್ಕೆ ಹೀಗಾಗುತ್ತಿರಲಿಲ್ಲ. ಗುಜರಾತಿನಲ್ಲಿ ಬಿಜೆಪಿ ಚುನಾವಣೆ ಗೆದ್ದಿದೆ. ಆದರೆ ಇದರಿಂದ ಸ್ವತಃ ಪಕ್ಷ ಸಂತುಷ್ಟವಾಗಿಲ್ಲ ಹಾಗೆಯೇ ಸಂಘವೂ ಸಂತುಷ್ಟವಾಗಿಲ್ಲ. ಆರೆಸ್ಸೆಸ್ ಈ ಕುರಿತು ಬಿಜೆಪಿ ಜೊತೆ ಕಳೆದ ಡಿಸೆಂಬರ್ ೨೮ ರಂದು ಅವಲೋಕನ ನಡೆಸಿದ್ದು, ಈ ಬೈಠಕ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಹಾಜರಿದ್ದರು.

ಈ ಎರಡು ವಿಷಯಗಳ ಬಗ್ಗೆ ಬಿಜೆಪಿ ಕೆಲಸ ಮಾಡದಿದ್ದರೆ, 2019 ಲೋಕಸಭಾ ಚುನಾವಣೆ ಮತ್ತು 2018 ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮಾರ್ಗವು ಕಷ್ಟಕರವಾಗಬಹುದು ಎಂದು ಸ್ವದೇಶಿ ಜಾಗರಣ್ ಮಂಚ್ ನೇತಾರರೊಬ್ಬರು ತಾಕೀತು ನೀಡಿದ್ದಾರೆ.

ವರದಿ ಕೃಪೆ: ಜನಸತ್ತಾ.ಕಾಮ್

Leave a Reply