ದೆಹಲಿಯ ಆಜಾದ್ಪುರ್ ಬಡಾವಣೆಯ ಬುಡಾ ಬಾಗ್ ಕೊಳಗೇರಿಯ ರೈಲು ಹಳಿಗಳ ಬಳಿ ಪ್ಲಾಸ್ಟಿಕ್ ಚೀಲಗಳಿಂದಲೂ, ಗೋಡೆಗಳ ಮೇಲೆ ತೇಪೆ ತೇಪೆ ಯಾಗಿ ಮಣ್ಣು ಸವರಲಾದ ಪುಟ್ಟ ಮನೆಯೊಂದಿದೆ. ಆಗಾಗ ಓಡುವ ರೈಲಿನ ಆರ್ಭಟದಲ್ಲಿ ಎಲ್ಲಿ ಈ ಚಿಕ್ಕ ಸೂರು ಬಿದ್ದು ಬಿಡುವುದೋ ಎಂಬ ಆತಂಕ ಮನಡ ಮಾಡುತ್ತದಾರೂ ಅದು ಪ್ರತಿ ಬಾರಿ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳುತ್ತದೆ. ಹೌದು. ದೆಹಲಿ ರಾಜ್ಯ ಅಥ್ಲೆಟಿಕ್ ಮೀಟ್ ನಲ್ಲಿ 100ಮೀಟರ್ ಓಟವನ್ನು 11 ಸೆಕೆಂಡುಗಳಲ್ಲಿ ಹಾಗೂ 200 ಮೀಟರ್ ಓಟವನ್ನು 22ಸೆಕೆಂಡು11 ಮಿಲಿ ಸೆಕೆಂಡುಗಳಲ್ಲಿ ಓಡಿ 16 ವರ್ಷ ಪ್ರಾಯದ ಒಳಗಿನ ರಾಷ್ಟೀಯ ದಾಖಲೆಯನ್ನು ಮುರಿದ ಬಾಲಕ ನಿಸಾರ್ ಅಹ್ಮದ್ ಜೀವನದ ಸಾಧನೆ ಇದು.

ನಿಸಾರ್ ಅಹ್ಮದ್ ರಿಕ್ಷಾ ಚಾಲಕನ ಪುತ್ರನಾಗಿದ್ದು ಬಡತನದಲ್ಲಿ ಮಿಂದೆದ್ದ ಪ್ರತಿಭಾನ್ವಿತ ಓಟಗಾರ. ನಿಸಾರ್ ಅಹ್ಮದ್ ನನ್ನು 2013 ರಲ್ಲಿ ಕಂಡ ಆತನ ದೈಹಿಕ ಶಿಕ್ಷಕರಾದ ಸುರೇಂದ್ರ ಸಿಂಗ್ ರವರು” ನಾನು ಆತನನ್ನು ಬರಿಗಾಲಿನಲ್ಲಿ ಓಡುವುದನ್ನು ಕಂಡಿದ್ದೆ. ಆತನಿಗೆ ಅತ್ಯಗತ್ಯ ತರಬೇತಿ ಬೇಕಾಗಿರುವುದೆಂಬುದನ್ನು ಕಂಡುಕೊಂಡ ನಂತರ ನಾನು ಆತನನ್ನು ತರಬೇತು ಗೊಳಿಸಿದೆ”ಎನ್ನುತ್ತಾರೆ.

15-18 ವರ್ಷದೊಳಗಿನ ಅಥ್ಲೀಟ್ ಗಳಿಗೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ಹಾಗೂ ಸ್ಪೋರ್ಟ್ಸ್ ಮ್ಯಾನೆಜ್‌ಮೆಂಟ್‌ ಕವಾಗುತ್ತಿತ್ತಾದರಮೆಡಲ್ ಹಂಟ್ ಸಹಯೋಗದಲ್ಲಿ ನೀಡಲಾಗುವ ವಿಶೇಷ ತರಬೇತಿಗೆ ಇದೀಗ ಅಹ್ಮದ್ ಭಾಜನರಾಗಿದ್ದಾರೆ.
ವಿಶೇಷವೇನೆಂದರೆ ಈ ತರಬೇತಿಯು ಒಂದು ತಿಂಗಳಾವಧಿಯನ್ನು ಒಳಗೊಂಡಿದ್ದು ಪ್ರಸಿದ್ಧ ಓಟಗಾರ ಹುಸೈನ್ ಬೋಲ್ಟ್ ಹಾಗೂ ಅವರ ಕೋಚ್ ಗ್ಲೇನ್ ಮಿಲ್ ರವರಿರುವ ಜಮೈಕಾದ ರೇಸರ್ಸ್ ಟ್ರ್ಯಾಕ್ ಕ್ಲಬ್ ಕಿಂಗ್ ಸ್ಟನ್ ನಲ್ಲಿ ನಡೆಯಲಿದೆ.
ದೇಶಿಯ ಟ್ರ್ಯಾಕ್ ನಲ್ಲಿ 2 ಸೆಕೆಂಡುಗಳ ಅಂತರದಲ್ಲಿ ಹುಸೈನ್ ಬೋಲ್ಟ್ ರವರ ದಾಖಲೆಗೆ ಸಮೀಪಿಸುತ್ತಿರುವ ಬಾಲಕ ನಿಸಾರ್ ಅಹ್ಮದ್ ವಿಶ್ವ ದಾಖಲೆಯನ್ನು ಮುರಿಯುವನೇ ಎಂದು ಕಾದು ನೋಡಬೇಕಿದೆ.

ತಾನು ಗೆದ್ದ ಪದಕಗಳೊಂದಿಗೆ ಪುಟ್ಟ ಮನೆಯಲ್ಲಿ ವಾಸಿಸುವ ಬಾಲಕನಿಗೆ ಸರಿಯಾದ ಪೌಷ್ಟಿಕಾಹಾರದ ಅಗತ್ಯತೆ ಇದೆ.ಆದರೆ ನಿಸಾರ್ ತನಗೆ ಬೇಕಾದುದ್ದನ್ನು ಪೂರೈಸಲು ತನ್ನ ಕುಟುಂಬವು ಬಹಳ ಪರಿಶ್ರಮ ಮಾಡುತ್ತಿದೆ ಎಂದು ಹೇಳುತ್ತಾರೆ. ತಾಯಿ ಸೈಫುನ್ನಿಶಾರವರು ಮಗನ ಸಾಧನೆಯನ್ನು ನೆನೆಯುವಾಗ “ಆತ ಮಗುವಾಗಿದ್ದಾಗಲೂ ತುಂಬಾ ವೇಗವಾಗಿ ಓಡುತ್ತಿದ್ದ ಆತನನ್ನು ಹಿಡಿಯಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ” ಎಂದು ನಸುನಗುತ್ತಾರೆ.

ಸ್ನೇಹಿತರ ಮನೆಗೆ ತಾನು ತೆರಳುತ್ತೇನಾದರೂ ಅವರನ್ನು ನಮ್ಮ ಚಿಕ್ಕ ಮನೆಯಿಂದಾಗಿ ಮನೆಗೆ ಆಮಂತ್ರಿಸುವುದಿಲ್ಲ. ಕೆಲವೊಮ್ಮೆ ನನಗೆ ನಮ್ಮ ಪರಿಸ್ಥಿತಿಯಿಂದ ಅತೀವ ದುಃಖ ವಾಗುತ್ತಿತ್ತಾದರೂ ಬಡತನವೇ ನನ್ನ ಸಾಧನೆಗಳಿಗೆ ಸ್ಪೂರ್ತಿ ನೀಡಿತು ಎಂದು ನಿಸಾರ್ ಹೇಳುತ್ತಾರೆ.
ಅಂತೂ ಕೇರಳ,ಉತ್ತರಾಖಂಡ, ಒರಿಸ್ಸಾ ಹಾಗೂ ದೆಹಲಿಯ ಅಥ್ಲೀಟ್ ಗಳೊಂದಿಗೆ ನಿಸಾರ್ ಅಹ್ಮದ್ ಜಮೈಕಾದ ನಾಡಿನಲ್ಲಿಯೂ ತಮ್ಮ ಟ್ರ್ಯಾಕ್ ನ್ನು ಕಾಯ್ದುಕೊಂಡಿದ್ದಾರೆ.

Leave a Reply